ಸೇನೆಗೂ ಬೇಕು ಸೈಬರ್ ತಂತ್ರಜ್ಞಾನದ ಬಲ- ಅಧ್ಯಯನ ವರದಿ
0
ಏಪ್ರಿಲ್ 01, 2019
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಹ್ಯ ಮತ್ತು ಆಂತರಿಕ ಶಕ್ತಿಗಳಿಂದ ಸೈಬರ್ ಬೆದರಿಕೆಗಳು ಹೆಚ್ಚಾಗುತ್ತಿರುವಂತೆಯೇ ಭಾರತ ತನ್ನ ಸೇನಾ ಪಡೆಗಳ ಸೈಬರ್ ಸಾಮಥ್ರ್ಯವನ್ನು ಹೆಚ್ಚಿಸಲೇಬೇಕಾದ ಅಗತ್ಯತೆಯೊಂದನ್ನು ಇತ್ತೀಚಿನ ಅಧ್ಯಯನ ವರದಿಯೊಂದು ಬಹಿರಂಗ ಪಡಿಸಿದೆ.
ಇದರಲ್ಲಿ ಭದ್ರತಾ ಸೈಬರ್ ಏಜನ್ಸಿಯೊಂದರ ಸ್ಥಾಪನೆಯ ಪ್ರಸ್ತಾವನೆಯೊಂದಿಗೆ ವಿಶ್ವಾಸಾರ್ಹ ಸೈಬರ್ ನಿರೋಧಕತೆ ಎಂಬ ಶೀರ್ಷಿಕೆಯಲ್ಲಿ ಬಹಿರಂಗಗೊಂಂಡಿರುವ ಅಧ್ಯಯನ ವರದಿಯೊಂದು, ನಮ್ಮ ಸೇನಾ ಪಡೆಗಳಲ್ಲಿ ಆತ್ಯಾಧುನಿಕ ಸೈಬರ್ ತಂತ್ರಜ್ಞಾನದ ಅಳವಡಿಕೆ ಹಾಗೂ ಅವುಗಳ ಸೂಕ್ತರೀತಿಯ ಬಳಕೆಯ ಅಗತ್ಯತೆಯನ್ನು ಒತ್ತಿ ಹೇಳಿದೆ.
ಭಾರತೀಯ ಸೇನಾಪಡೆಗಳ ಸೈಬರ್ ಸಾಮಥ್ರ್ಯವನ್ನು ಇನ್ನಷ್ಟು ವಿಸ್ತರಿಸಲು ಪ್ರಮುಖ ಏಳು ಅಂಶಗಳನ್ನು ಈ ಅಧ್ಯಯನ ವರದಿಯು ಗುರುತಿಸಿದೆ. ಇದರ ಪ್ರಥಮ ಹಂತವಾಗಿ ಭದ್ರತಾ ಸೈಬರ್ ಏಜನ್ಸಿ ಯೊಂದನ್ನು ನಿರ್ಧಿಷ್ಟ ಕಾಲಮಿತಿಯಲ್ಲಿ ಅಭಿವೃದ್ಧಿಗೊಳಪಡಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.