ಬೆಂಗಳೂರು: ಕನ್ನಡ ಸೇರಿ ಭಾರತೀಯ ಚಿತ್ರರಂಗದಲ್ಲೇ ಹೊಸ ಹವಾ ಸೃಷ್ಟಿಸಿದ್ದ "ಕೆಜಿಎಫ್" ಚಿತ್ರದಲ್ಲಿ ಖಳನಾಯಕನ್ಣಾಗಿ ಕಾಣಿಸಿಕೊಂಡಿದ್ದ ಜಾನ್ ಕೊಕ್ಕೇನ್ ಕೇರಳ ಯುವತಿಯನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರೊಡನೆ ಜಾನ್ ಹಸೆಮಣೆ ಏರಿದ್ದು ನಟ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಫೋಟೋ ಹಾಕುವ ಮೂಲಕ ಮದುವೆ ವಿಚಾರವನ್ನು ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ಕೇರಳದಲ್ಲಿ ಸೌರಮಾನ ಯುಗಾದಿ (ವಿಷು ಹಬ್ಬ)ಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಸೋಮವಾರ ವಿಷು ಹಬ್ಬವಿದ್ದು ಅದೇ ದಿನ ಜಾನ್ ತನ್ನ ಗೆಳತಿಯೊಂದಿಗೆ ವಿವಾಹ ಬಂಧನಕ್ಕೆ ಒಳಗಾದರು.
ಜಾನ್ ಸಹ ಮೂಲತಃ ಕೇರಳ್ದವರೇ ಆಗಿದ್ದು ಪುನೀತ್ ರಾ???ಕುಮಾರ್ ಅಭಿನಯದ "ಪ್ರಥ್ವಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು.ಅನೇಕ ಚಿತ್ರಗಳಲ್ಲಿ ವಿಲನ್ ಆಗಿ ಕ್ಣಿಸಿಕೊಂಡಿದ್ದ ಜಾನ್ ಯಶ್ ಅಭಿನಯದ "ಕೆಜಿಎಫ್" ಮಾಉಲಕ ವಿಶೇಷ ಖ್ಯಾತಿ ಪಡೆಇದ್ದರು. ಇದೀಗ ನಟ ಮತ್ತೆ ಪುನೀತ್ ಅಭಿನಯದ "ಯುವರತ್ನ" ಚಿತ್ರದಲ್ಲಿ ಸಹ ಅಭಿನಯಿಸುತ್ತಿದ್ದಾರೆ.