ಉಪ್ಪಳ: ಶ್ರೀ ದುರ್ಗಾ ಸಪ್ತಸ್ವರ ಸಿಂಗಾರಿ ಮೇಳದ ಪಾದಾರ್ಪಣಾ ಕಾರ್ಯಕ್ರಮ ಮೇ.12 ರಂದು ಆವಳ ಮಠ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ದುರ್ಗಾಸದನದಲ್ಲಿ ನಡೆಯಲಿದೆ.
ದೇವಸ್ಥಾನದ ಆಡಳಿತ ಮೊಕ್ತೇಸರ ಗಣಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಿಶ್ರಾಂತ ಸಹಾಯಕ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಭಟ್, ಯಕ್ಷಗಾನ ಹಿಮ್ಮೇಳ ಕಲಾವಿದ ಶೇಣೆ ಸುಬ್ರಹ್ಮಣ್ಯ ಭಟ್, ಬಾಯಾರು ಸಹಕಾರಿ ಸೇವಾ ಬ್ಯಾಂಕಿನ ನಿವೃತ್ತ ಕಾರ್ಯದರ್ಶಿ ಸದಾನಂದ.ಎಂ, ಸಿಂಗಾರಿ ಮೇಳದ ತರಬೇತುದಾರ ರಾಜೇಶ್ ಪಾಂಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪೈವಳಿಕೆ ಗ್ರಾ.ಪಂ ಸದಸ್ಯ ಆಟಿಕುಕ್ಕೆ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ದೇವಳದ ಹೊರಾಂಗಣದಲ್ಲಿ ಸಿಂಗಾರಿ ಮೇಳದ ಪ್ರದರ್ಶನ ಏರ್ಪಡಿಸಲಾಗಿದೆ.