ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಮತಯಂತ್ರಗಳ ರ್ಯಾಂಡಮೈಸೇಷನ್ ದಿನಾಂಕಗಳನ್ನು ನಿಗದಿಪಡಿಸಲಾಗಿದೆ.
ಏ.9ರಂದು ಸಂಜೆ 4 ಗಂಟೆಗೆ ಇ.ವಿ.ಎಂ., ವಿವಿಪಾಟ್ ಇತ್ಯಾದಿಗಳ ರ್ಯಾಂಡಮೈಸೇಷನ್ ನಡೆಯಲಿದೆ. ಬ್ಯಾಲೆಟ್ ಯೂನಿಟ್ ಅಭ್ಯರ್ಥಿಗಳ ಕುರಿತು ಮಾಹಿತಿ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಎ.12 ಮತ್ತು 13 ರಂದು ಬೆಳಗ್ಗೆ 9 ಗಂಟೆಗೆ ವಿವಿಧ ಕೇಂದ್ರಗಳಲ್ಲಿ ನಡೆಯಲಿದೆ. ಎ.12ರಂದು ಪಯ್ಯನ್ನೂರು ಎ.ಕೆ.ಜಿ.ವಿ.ಎಚ್.ಎಸ್.ಎಸ್.ನಲ್ಲಿ, ಕಲ್ಯಾಶ್ಶೇರಿಯದ್ದು ಮಾಡಾಯಿ ಜಿ.ಜಿ.ಎಚ್.ಎಸ್.ಎಸ್.ನಲ್ಲೂ, ಎ.13ರಂದು ಮಂಜೇಶ್ವರ, ಕಾಸರಗೋಡು, ಉದುಮ ಕ್ಷೇತ್ರಗಳ ಚಟುವಟಿಕೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ. ಎ.13ರಂದು ಕಾಂಞಂಗಾಡು, ತ್ರಿಕರಿಪುರ ಕ್ಷೇತ್ರಗಳ ಚಟುವಟಿಕೆ ಪಡನ್ನಕ್ಕಾಡ್ ನೆಹರೂ ಕಾಲೇಜಿನಲ್ಲಿ ನಡೆಯಲಿದೆ. ಎ.21ರಂದು ಮತಗಟ್ಟೆ ಕರ್ತವ್ಯ ಸಿಬ್ಬಂದಿಗೆ ಮತಗಟ್ಟೆ ಮಟ್ಟದ ರ್ಯಾಂಡಮೈಸೇಷನ್ ಬೆಳಗ್ಗೆ 9 ರಿಂದ ಜಿಲ್ಲಾಧಿಕಾರಿ ಅವರ ಚೇಂಬರ್‍ನಲ್ಲಿ ನಡೆಯಲಿದೆ. ರ್ಯಾಂಡಮೈಸೇಷನ್ ಅವ„ಯಲ್ಲಿ ಅಭ್ಯರ್ಥಿಗಳು ಅಥವಾ ಏಜೆಂಟರು ಭಾಗವಹಿಸುವಂತೆ ಜಿಲ್ಲಾ„ಕಾರಿ ತಿಳಿಸಿದ್ದಾರೆ.