`ಸಮಾಜದ ವಿರಾಟ್‍ಶಕ್ತಿಯನ್ನು ಉದ್ಭೋದಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು'-ಕೆ.ನಾರಾಯಣಯ್ಯ
0
ಏಪ್ರಿಲ್ 04, 2019
ಮಧೂರು: ವೈಯಕ್ತಿಕ ಹಿತಸಾಧನೆಯ ಮಹಾಪ್ರಸ್ಥಾನವನ್ನು ಬಿಟ್ಟು ಸಮಾಜದ ವಿರಾಟ್‍ಶಕ್ತಿಯನ್ನು ಉದ್ಭೋದಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ನಮ್ಮ ಸಮಾಜವು ಉಳಿದೀತು ಎಂಬುದಾಗಿ ಮಧೂರು ಸಹಕಾರಿ ಬ್ಯಾಂಕ್‍ನ ಅಧ್ಯಕ್ಷರೂ, ಹಿರಿಯ ಸಮಾಜ ಸೇವಕರೂ ಆದ ಕೆ.ನಾರಾಯಣಯ್ಯ ಅವರು ಅಭಿಪ್ರಾಯಪಟ್ಟರು.
ಇಲ್ಲಿನ ಮುಟ್ಟತ್ತೋಡಿಯ ಪರಮೇಶ್ವರ ಅಡಿಗರ ಮನೆಯಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಇದರ ಕಾಸರಗೋಡು ಅಂಗಸಂಸ್ಥೆಯ 153 ನೇ ಸಂಪರ್ಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಅಂಗ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಅಂಗಸಂಸ್ಥೆಯ ನೇತೃತ್ವದಲ್ಲಿ ಬೇಳದ ಶರವಣ ಟ್ರಸ್ಟ್‍ನ ಸಹಯೋಗದೊಂದಿಗೆ ಇಲ್ಲಿನ ಕುಮಾರಮಂಗಲದ ಸುಬ್ರಹ್ಮಣ್ಯ ದೇಗುಲದಲ್ಲಿ ನಡೆಯುವ ವಸಂತ ವೇದಪಾಠ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಟುಗಳು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಅಂಗಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನರಸಿಂಹ ಮಯ್ಯ ಎಂ. ಕರೆಯಿತ್ತರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಗೋಪಾಲಕೃಷ್ಣ ಅಡಿಗ ಅವರು ಉಪಸ್ಥಿತರಿದ್ದರು.
ಅಂಗಸಂಸ್ಥೆಯ ಮುಂದಿನ ಸಂಪರ್ಕ ಸಭೆ ಏ.7 ರಂದು ಅಪರಾಹ್ನ ಬೆದ್ರಡ್ಕ ಸಮೀಪದ ಉಡುವದ ರಾಮ ಹೇರಳ ಅವರ ಮನೆಯಲ್ಲಿ ಜರಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಕರೆ ನೀಡಲಾಯಿತು. ಶ್ರೀಕೃಷ್ಣ ಅಡಿಗ ಸ್ವಾಗತಿಸಿ, ಬಿ.ಕೃಷ್ಣ ಕಾರಂತ ವಂದಿಸಿದರು.