ನವದೆಹಲಿ: ಭಾರತೀಯ ಸೇನೆಗೆ ಮತ್ತೊಂದು 'ಬ್ರಹ್ಮಾಸ್ತ್ರ' ಶೀಘ್ರ ಸೇರ್ಪಡೆಯಾಗಲಿದ್ದು, ಭಾರತದ ಅತ್ಯಂತ ಯಶಸ್ವೀ ಹಾಗೂ ಪ್ರಬಲ ಕ್ಷಿಪಣಿ ಬ್ರಹ್ಮೋಸ್ ಸರಣಿಯ ಸುಧಾರಿತ ಕ್ಷಿಪಣಿ ಶೀಘ್ರ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.
ಮೂಲಗಳ ಪ್ರಕಾರ ಭಾರತ ಮತ್ತು ರಷ್ಯಾ ಜಂಟಿಯಾಗಿ ತಯಾರಿಸುತ್ತಿರುವ ಸೂಪರ್ ಸಾನಿಕ್ ಕ್ರೂಸ್ ಮಿಸೈಲ್ ಬ್ರಹ್ಮೋಸ್ ನ ಗುರಿ ಬೇಧನಾ ಸಾಮಥ್ರ್ಯವನ್ನು ಹೆಚ್ಚಿಸಲು ಕ್ಷಿಪಣಿ ತಯಾರಿಕಾ ಕಂಪೆನಿ ಬ್ರಹ್ಮೋಸ್ ಏರೋಸ್ಪೇಸ್ ಕಂಪೆನಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬ್ರಹ್ಮೋಸ್ ಏರೋಸ್ಪೇಸ್ ಕಂಪೆನಿಯ ಆಡಳಿತ ಸಹ ನಿರ್ದೆಶಕ ಅಲೆಕ್ಸಾಂಡರ್ ಮಾಸ್ಕಿವ್ ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, 'ಪ್ರಸ್ತುತ ಬ್ರಹ್ಮೋಸ್ ನ ಗರಿಷ್ಠ ವೇಗ 2.8 ಮ್ಯಾಕ್ ಗಳಷ್ಟಾಗಿದ್ದರೆ ಭವಿಷ್ಯದಲ್ಲಿ ಈ ವೇಗವನ್ನು 4.5 ಮ್ಯಾಕ್ ಗೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು. ಬ್ರಹ್ಮೋಸ್ ನ ಪ್ರಸ್ತುತ ಗುರಿ ಸಾಮಥ್ರ್ಯ 400 ಕಿಲೋಮೀಟರ್ ಗಳಾಗಿದ್ದು, ಇದನ್ನು 500 ಕಿಲೋಮೀಟರ್ ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಇದರ ಗುರಿ ಬೇಧನಾ ಸಾಮಥ್ರ್ಯದ ಜೆuಟಿಜeಜಿiಟಿeಜತೆಜೆuಟಿಜeಜಿiಟಿeಜತೆಗೆ ಹೈಪರ್ ಸೌಂಡ್ ವಿಧಾನದ ಮೂಲಕ ಈ ಕ್ಷಿಪಣಿಯ ವೇಗವರ್ಧನೆಗೂ ನಿರ್ಧರಿಸಲಾಗಿದೆ ಎನ್ನಲಾಗಿದೆ.
ಭಾರತೀಯ ಮೂರೂ ಸಶಸ್ತ್ರ ಪಡೆಗಳಲ್ಲೂ ಬ್ರಹ್ಮೋಸ್ ಕ್ಷಿಪಣಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರಸ್ತುತ ಶತ್ರುಗಳ ದೂರದ ಗುರಿಯನ್ನು ಬೇಧಿಸುವಲ್ಲಿ ಆಧುನಿಕ ಯುದ್ಧ ತಂತ್ರಜ್ಞಾನಕ್ಕೆ ಹೋಲಿಸಿದಲ್ಲಿ ಬ್ರಹ್ಮೋಸ್ ನ ಗುರಿ ಬೇಧನಾ ಸಾಮಥ್ರ್ಯ ಕಡಿಮೆಯಿದ್ದು ಇದನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಮುಂದಿನ ತಲೆಮಾರಿನ ಯುದ್ಧತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬ್ರಹ್ಮೋಸ್ ಎನ್.ಜಿ. (ನೆಕ್ಸ್ಟ್ ಜನರೇಷನ್) ಎಂಬ ಹೊಸ ಮಾದರಿಯ ಕ್ಷಿಪಣಿ ತಯಾರಿ ಯೋಜನೆ ಕಾರ್ಯಗತಗೊಳ್ಳುವ ಹಂತದಲ್ಲಿದೆ ಎಂದು ಅಲೆಕ್ಸಾಂಡರ್ ಮಾಸ್ಕಿವ್ ತಿಳಿಸಿದರು.
ಪ್ರಮುಖ ವಿಚಾರವೆಂದರೆ, ಈ ನೂತನ ಕ್ಷಿಪಣಿಯನ್ನು ಪ್ರಮುಖವಾಗಿ ಭಾರತೀಯ ವಾಯುಪಡೆಗೆಂದೇ ತಯಾರಿಸಲಾಗುತ್ತಿದೆ. ಭಾರತೀಯ ವಾಯುಪಡೆಯ ಸುಖೋಯ್ 30 ಎಂ.ಕೆ.ಐ. ಹಾಗೂ ತೇಜಸ್ ಲಘು ಯುದ್ಧ ವಿಮಾನಗಳಿಗೆ ಹೊಂದಿಕೆuಟಿಜeಜಿiಟಿeಜಳ್ಳುವ ಮಾದರಿಯಲ್ಲಿ ಈ ಕ್ಷಿಪಣಿಗಳನ್ನು ತಯಾರಿಸಲಾಗುತ್ತಿದೆ. ಇದೀಗ ವಾಯುಪಡೆಯ ಬಳಿಯಲ್ಲಿರುವ ಬ್ರಹ್ಮೋಸ್ ಕ್ಷಿಪಣಿಯ ತೂಕ 2.5 ಟನ್ ಗಳಾಗಿದ್ದರೆ ಈ ಹೊಸ ತಲೆಮಾರಿನ ಕ್ಷಿಪಣಿ 1.5 ಟನ್ ಗಳಷ್ಟು ತೂಕವನ್ನು ಹೊಂದಿರಲಿದೆ ಎಂದು ಅವರು ಹೇಳಿದರು.
ಯುದ್ದ ವಿಮಾನಗಳ ಅಪ್ ಗ್ರೇಡ್ ಗೂ ಚಿಂತನೆ:
ಈ ಕ್ಷಿಪಣಿ ತಯಾರುಗೊಂಡ ಬಳಿಕ ಯುದ್ದ ವಿಮಾನಗಳ ಅಪ್ ಗ್ರೇಡ್ ಗೂ ಚಿಂತನೆ ನಡೆಸಲಾಗಿದ್ದು, ಈ ಯೋಜನೆ ಮೂಲಕ ಸುಖೋಯ್ ಯುದ್ಧ ವಿಮಾನವೊಂದು ಏಕಕಾಲಕ್ಕೆ ಐದು ಕ್ಷಿಪಣಿಗಳನ್ನು ಹೊತ್ತೂಯ್ಯಬಲ್ಲ ಸಾಮಥ್ರ್ಯವನ್ನು ಹೊಂದಲಿದೆ. ಮತ್ತು ಇದಕ್ಕಾಗಿ ಸುಖೋಯ್ ರಚನೆಯಲ್ಲಿ ಬದಲಾವಣೆಗಳನ್ನು ತರಲು ರಕ್ಷಣಾ ಇಲಾಖೆ ನಿರ್ಧರಿಸಿದೆ. ಪ್ರಸ್ತುತ ಸುಖೋಯ್ ಯುದ್ಧ ವಿಮಾನವು ಏಕಕಾಲಕ್ಕೆ ಒಂದು ಕ್ಷಿಪಣಿಯನ್ನು ಮಾತ್ರವೇ ಹೊತ್ತೂಯ್ಯಬಲ್ಲ ಸಾಮಥ್ರ್ಯವನ್ನು ಹೊಂದಿದೆ.