ಕಾಂಗ್ರೆಸ್ ಪ್ರಣಾಳಿಕೆ: ಸೋನಿಯಾ ಗಾಂಧಿ ತೀವ್ರ ಅಸಮಾಧಾನ!
0
ಏಪ್ರಿಲ್ 04, 2019
ನವದೆಹಲಿ: ಲೋಕಸಭಾ ಚುನಾವಣೆಗೆ ಮೋದಿಯನ್ನು ಎದುರಿಸಲು ಮಹಾಘಟಬಂಧನ್ ರಚಿಸಿರುವ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಸೋನಿಯಾ ಗಾಂಧಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ಸೇನಾ ಪಡೆಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಮರುಪರಿಶೀಲಿಸಿರುವ ಅಂಶಗಳನ್ನೊಳಗೊಂಡ ಕಾಂಗ್ರೆಸ್ ನ ಪ್ರಣಾಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿ ಸುದ್ದಿಗೆ ಗ್ರಾಸವಾಗಿತ್ತು. ಈಗ ಸೊನಿಯಾ ಗಾಂಧಿ ಪ್ರಣಾಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿ, ಪ್ರಣಾಳಿಕೆ ಮುಖಪುಟದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾವಚಿತ್ರ ದೊಡ್ಡದಾಗಿ ಪ್ರಕಟವಾಗಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿರುವುದಾಗಿ ತಿಳಿದುಬಂದಿದೆ.
ಪ್ರಣಾಳಿಕೆ ಸಮಿತಿ ಸಂಚಾಲಕರಾಗಿರುವ ಪಕ್ಷದ ನಾಯಕ ರಾಜೀವ್ ಗೌಡ ಅವರನ್ನು ಪ್ರಣಾಳಿಕೆ ಬಿಡುಗಡೆಗೂ ಮುನ್ನ ಭೇಟಿ ಮಾಡಿದ್ದ ಸೋನಿಯಾ ಗಾಂಧಿ, ಪ್ರಣಾಳಿಕೆ ಪುಸ್ತಕದ ಮುಖಪುಟದಲ್ಲಿ ರಾಹುಲ್ ಗಾಂಧಿ ಭಾವಚಿತ್ರ ದೊಡ್ಡದಾಗಿ ಪ್ರಕಟವಾಗದೇ ಇರುವುದಕ್ಕೆ ಸೋನಿಯಾ ಗಾಂಧಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯ ಭಾವಚಿತ್ರವಷ್ಟೇ ಅಲ್ಲದೇ ಪಕ್ಷದ ಚಿನ್ಹೆಯೂ ದೊಡ್ಡದಾಗಿ ಪ್ರಕಟವಾಗಿಲ್ಲ. ಜನರು ನೆರೆದಿರುವ ಚಿತ್ರದ ಕೆಳ ಭಾಗದಲ್ಲಿ ರಾಹುಲ್ ಗಾಂಧಿ ಭಾವಚಿತ್ರವನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.
ಆದರೆ ಸೋನಿಯಾ ಗಾಂಧಿ ಪ್ರಣಾಳಿಕೆ ಪುಸ್ತಕದ ವಿಷಯವಾಗಿ ಅಸಮಾಧಾನಗೊಂಡಿದ್ದಾರೆ ಎಂಬ ವಿಷಯವನ್ನು ಪಕ್ಷದ ವಕ್ತಾರ ರಣ್ ದೀಪ್ ಸುರ್ಜೇವಾಲ ತಳ್ಳಿಹಾಕಿದ್ದಾರೆ.