ಕುಂಬಳೆ: ಇತಿಹಾಸ ಪ್ರಸಿದ್ಧ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪುಷ್ಕರಿಣಿಯ ನವೀಕರಣದ ಮುಹೂರ್ತ ಬುಧವಾರ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಮಾಧವ ಅಡಿಗರ ನೇತೃತ್ವದಲ್ಲಿ ಭಕ್ತಾದಿಗಳ ಸಮ್ಮುಖದಲ್ಲಿ ನೆರವೇರಿತು.
ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಹಿರಿಯರಾದ ಕೆ.ವಿಶ್ವನಾಥ್ ನಾಯಕ್ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅವರು ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸುಧಾಕರ ಕಾಮತ್, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಬಾಬುರಾಜ್, ರಮಾನಾಥ ಶೆಟ್ಟಿ, ಉದ್ಯಮಿ ಬಿ.ವಿಕ್ರಂ ಪೈ, ದೇವಸ್ಥಾನದ ಪ್ರಬಂಧಕ ರಾಜಶೇಖರ್, ಭಕ್ತದಿಗಳಾದ ಕೆ.ವಿವೇಕ್ ಭಕ್ತ , ದಯಾನಂದ ರಾವ್, ಅಭಿಯಂತರ ಶಿವಶಂಕರ ಮತ್ತು ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದರು.
ಸುಮಾರು ಅರ್ಧ ಎಕ್ರೆಗಳಷ್ಟು ವಿಸ್ತಾರವಾಗಿರುವ ಪುಣ್ಯ ಪುಷ್ಕರಿಣಿಯು ಪುರಾಣ ಇತಿಹಾಸದ ಮಹತ್ವ ಹೊಂದಿದ್ದು, ಪೂಜ್ಯ ಕಣ್ವ ಮಹರ್ಶಿಗಳು ತಪೋನಿರತರಾಗಿದ್ದ ಸ್ಥಳ ಎಂಬ ಪ್ರತೀತಿಯಿದೆ. ಜೊತೆಗೆ ಸರ್ವ ರೋಗ ನಿವಾರಕವಾದ ಈ ಪುಷ್ಕರಿಣಿಯ ಜಲ ಪವಿತ್ರ ಎಂಬ ಪ್ರತೀತಿ. ಆದರೆ ಕಳೆದ ಹಲವು ದಶಕಗಳಿಂದ ಹಾನಿಗೊಂಡಿರುವ ಈ ಪುಷ್ಕರಿಣಿ ಉಪಯೋಗ ಶೂನ್ಯವಾಗಿದ್ದು, ಇದೀಗ ನವೀಕರಣ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ.