ಕಾಸರಗೋಡು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಎರಡು ದಿನಗಳು ಮಾತ್ರವೇ ಬಾಕಿ ಉಳಿದಿರುವಂತೆ ಈ ಅವಧಿಯಲ್ಲಿ ಪ್ರಚಾರವನ್ನು ಇನ್ನಷ್ಟು ಪರಾಕಾಷ್ಠೆಗೇರಿಸಲು ವಿವಿಧ ಪಕ್ಷಗಳು ಸಕ್ರಿಯವಾಗಿದೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ಇಂದು ಕಾಸರಗೋಡು ನಗರದಲ್ಲಿ ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಪರವಾಗಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ.
ಬೆಳಿಗ್ಗೆ 11.30 ಕ್ಕೆ ಪ್ರೆಸ್ ಕ್ಲಬ್ ಜಂಕ್ಷನ್‍ನಿಂದ ರೋಡ್ ಶೋ ಆರಂಭಗೊಂಡು ನಗರ ಪ್ರದಕ್ಷಿಣೆ ನಡೆಯಲಿದೆ. ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು, ದಕ್ಷಿಣ ಕನ್ನಡ ಜಿಲ್ಲೆಯ ಹಲವು ಬಿಜೆಪಿ ನೇತಾರರು, ಎನ್‍ಡಿಎ ಕಾಸರಗೋಡು ಲೋಕಸಭಾ ಕ್ಷೇತ್ರ ಅಭ್ಯರ್ಥಿ ರವೀಶ ತಂತ್ರಿ ಕುಂಟಾರು, ಎನ್‍ಡಿಎಯ ಕೇರಳದ ಮುಖಂಡರು ಭಾಗವಹಿಸಲಿದ್ದಾರೆ.
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಮೋನಪ್ಪ ಭಂಡಾರಿ, ಬಿಜೆಪಿಯ ರಾಜ್ಯ ನೇತಾರರಾದ ಪಿ.ಕೆ.ಕೃಷ್ಣದಾಸ್, ಪಿ.ಎಸ್.ಶ್ರೀಧರನ್ ಪಿಳ್ಳೆ ಸಹಿತ ಹಲವು ನೇತಾರರು ಕಾಸರಗೋಡಿಗೆ ಆಗಮಿಸಲಿದ್ದಾರೆ.