ಕಾಸರಗೋಡು: ತಳಂಗರೆ ಕಾನಕ್ಕೋಡು ಬಾಂದುಕುಡಿ ತರವಾಡಿನಲ್ಲಿ ನಡೆಯುತ್ತಿರುವ ಶ್ರೀ ವಯನಾಟು ಕುಲವನ್ ದೈವಂಕೆಟ್ಟು ಮಹೋತ್ಸವದಂಗವಾಗಿ ತಳಂಗರೆ ಮಾಲಿಕ್ ದೀನಾರ್ ಜುಮಾ ಮಸೀದಿ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆಯ ಮೂಲಕ ಕೋಮು ಸೌಹಾರ್ದತೆಯನ್ನು ಸಾರಿ ಹೇಳಿತು.
ಈ ರೀತಿಯ ಕಾರ್ಯಗಳು ಸೌಹಾರ್ದತೆಯನ್ನು ಘೋಷಿಸುವುದಕ್ಕೆ ನೆರವಾಗಲಿ ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಲವು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.