ಮಂಜೇಶ್ವರ: ತಲೇಕಳ ಮದಂಗಲ್ಲು ಮದಂಗಲ್ಲಾಯ ಧೂಮಾವತಿ ದೈವ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ ಏ.20 ಮತ್ತು 21 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಏ.20 ರಂದು ಶನಿವಾರ ಬೆಳಿಗ್ಗೆ 11 ಕ್ಕೆ ಚಪ್ಪರ ಮುಹೂರ್ತ, 21 ಭಾನುವಾರ ಪ್ರಾತ:ಕಾಲ 4 ಕ್ಕೆ ಭಂಡಾರ ಆಗಮನ, ಬೆಳಿಗ್ಗೆ 8 ಕ್ಕೆ ಗಣಪತಿ ಹವನ, ನವಕ ಕಲಶ, ತಂಬಿಲ, ಮಹಾಪೂಜೆ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ರಾತ್ರಿ 7.30 ರಿಂದ ಶ್ರೀ ಮದಂಗಲ್ಲಾಯ ಧೂಮಾವತಿ ದೈವದ ನೇಮೋತ್ಸವವು ನಡೆಯಲಿದೆ ಎಂದು ಸಂಬಂಧಪಟ್ಟವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.