ಕುಂಬಳೆ: ಕೋಟೆಕ್ಕಾರ್ ರಾಜಂದೈವ ಶ್ರೀಧೂಮಾವತಿ ದೈವಸ್ಥಾನದಲ್ಲಿ ವಾರ್ಷಿಕ ಧರ್ಮನೇಮೋತ್ಸವ ಗುರುವಾರ ಆರಂಭಗೊಂಡಿದ್ದು, ಇಂದು ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮದ ಅಂಗವಾಗಿ ಗುರುವಾರ ಬೆಳಿಗ್ಗೆ 7ಕ್ಕೆ ಗಣಪತಿ ಹೋಮ, 9ಕ್ಕೆ ನಾಗ ತಂಬಿಲ, ರಕ್ತೇಶ್ವರಿ ತಂಬಿಲ, 10 ರಿಂದ ದೀಪಾರಾಧನೆ, 11 ರಿಂದ ಹರಿಸೇವೆ, ಮಧ್ಯಾಹ್ನ 1 ಕ್ಕೆ ಅನ್ನದಾನ, ಅಪರಾಹ್ನ 3ಕ್ಕೆ ಕುತ್ಯಾಳ ಶ್ರೀರಕ್ತೇಶ್ವರಿ ಮಹಿಳಾ ಭಜನಾ ತಂಡದಿಂದ ಭಕ್ತಿ ಸಂಕೀರ್ತನೆ, ಸಂಜೆ 5ಕ್ಕೆ ಶ್ರೀಸತ್ಯನಾರಾಯಣ ಪೂಜಾರಂಭ,7ಕ್ಕೆ ಮಂಗಳಾರತಿ, ಪ್ರಸಾದ ವಿತರಣೆ, ಕೋಟೆಕ್ಕಾರ್ ಶ್ರೀಧೂಮಾವತಿ ಭಜನಾ ಸಂಘದಿಂದ ಭಜನಾ ಸಂಕೀರ್ತನೆ, ರಾತ್ರಿ 9ಕ್ಕೆ ಅನ್ನದಾನ, 10 ರಿಂದ ನೃತ್ಯೋತ್ಸವ, 11 ರಿಂದ ಹೊಸಂಗಡಿಯ ಶಾರದಾ ಕಲಾ ಆಟ್ರ್ಸ್ ತಂಡದಿಂದ ಅಣ್ಣೆ ಬರ್ಪೆಗೆ ತುಳು ನಾಟಕ ಪ್ರದರ್ಶನ ನಡೆಯಿತು.
ಶುಕ್ರವಾರ ಬೆಳಿಗ್ಗೆ 10ಕ್ಕೆ ಶ್ರೀಧೂಮಾವತಿ ದೈವಗಳ ನೇಮ, ಪ್ರಸಾದ ವಿತರಣೆ, ಅನ್ನದಾನಗಳು ನೆರವೇರಿದವು. ಸಂಜೆ 6 ರಿಂದ ಕೊರತ್ತಿ ದೈವದ ಕೋಲ, ಕಲ್ಲುರ್ಟಿ ದೈವದ ಕೋಲ, ಕಲ್ಲಾಲ್ತಾಯ ಗುಳಿಗನ ಕೋಲ, ಪ್ರಸಾದ ವಿತರಣೆ, ಅನ್ನದಾನಗಳು ನಡೆಯಿತು.
ಶನಿವಾರ ಬೆಳಿಗ್ಗೆ 11.30ಕ್ಕೆ ದೈವ ತಂಬಿಲ, ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನದಾನ ನೆರವೇರಿತು. ಇಂದು9ಭಾನುವಾರ) ಬೆಳಿಗ್ಗೆ 9ಕ್ಕೆ ಶುದ್ದೀಕಲಶ, ದೀಪಾರಾಧನೆಯೊಂದಿಗೆ ವಾರ್ಷಿಕ ಧರ್ಮನೇಮೋತ್ಸವ ಸಂಪನ್ನಗೊಳ್ಳಲಿದೆ.