ಮಂಜೇಶ್ವರ: ಗುವೆದಪಡ್ಪು ಶ್ರೀ ವಿಷ್ಣುಮೂರ್ತಿ ದೈವದ ಕೆಂಡ ಸೇವೆಯು ಏ.13 ರಂದು ರಾತ್ರಿ ನಡೆಯಲಿದೆ.
ಬೆಳಿಗ್ಗೆ 8 ಕ್ಕೆ ಮೇಲೇರಿ ರಚನೆ, ಸಂಜೆ 6 ಕ್ಕೆ ಭಂಡಾರ ಸ್ಥಾನದಿಂದ ಭಂಡಾರ ಹೊರಡುವುದು, ರಾತ್ರಿ 7.30 ಕ್ಕೆ ಮೇಲೇರಿಗೆ ಅಗ್ನಿ ಸ್ಪರ್ಶವಾದ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ.
ರಾತ್ರಿ 9.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಮ್ಯೂಸಿಕಲ್ ನೈಟ್ - 2019 ಬಳಿಕ 11.30 ಕ್ಕೆ ಕುಳಿಚ್ಚಾಟಂ ದರ್ಶನ ನಡೆಯಲಿದೆ. ಎ.14 ರಂದು ಪ್ರಾತ:ಕಾಲ 4 ಕ್ಕೆ ವಿಷ್ಣುಮೂರ್ತಿ ದೈವದ ಕೆಂಡ ಸೇವೆ, ಆ ಬಳಿಕ ಗುಳಿಗ ದೈವದ ಕೋಲ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಯಶಸ್ಸುಗೊಳಿಸಬೇಕೆಂದು ವ್ಯವಸ್ಥಾಪಕರು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.