ಕುಂಬಳೆ: ಭಾರತೀಯ ಕಿಸಾನ್ ಸಂಘದ ಕಾಸರಗೋಡು ಜಿಲ್ಲಾ ಮಟ್ಟದ ಸಮಾವೇಶವು ಕಾಸರಗೋಡು ಟೌನ್ ಬ್ಯಾಂಕಿನ ಸಭಾಭವನದಲ್ಲಿ ಇತ್ತೀಚೆಗೆ ಜರಗಿತು. ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಐ ಅವರು ಮಾತನಾಡಿ ದಿನದಿಂದ ದಿನಕ್ಕೆ ಬಿಸಿಲಿನ ಅತೀವ ತಾಪದಿಂದ ಜಲಮಟ್ಟ ಕುಸಿಯುತ್ತಿದ್ದು 12 ಜನ ಸಾವನ್ನಪ್ಪಿರುವರು. ಸುಮಾರು 400 ಜನರಿಗೆ ಸೂರ್ಯತಾಪದಿಂದ ಶರೀರದಲ್ಲಿ ಗುಳ್ಳೆಗಳು ಬಿದ್ದಿದ್ದು ಜಿಲ್ಲೆಯಲ್ಲಿ ಈ ರೋಗ ಕೆಲವು ಕಡೆಗಳಲ್ಲಿ ಕಾಣಿಸಿಕೊಂಡಿರುತ್ತದೆ.ಹೊಳೆ ಬಾವಿ ಕೆರೆಗಳು ಬರಡಾಗಿ ತೋಟಗದ್ದೆಗಳು ಒಣಗಿ ಕೃಷಿ ನಷ್ಟವಾಗಿರುತ್ತದೆ. ಅತಿವೃಷಿಯಿಂದ ಕಂಗಾಲಾದ ರೈತರ ಕೃಷಿ ಉತ್ಪಾದನೆ ನಾಶವಾಗಿದೆ. ಕೃಷಿಕರಿಗೆ ಸರಕಾರದಿಂದ ಈ ತನಕ ಯಾವುದೇ ಪರಿಹಾರ ದೊರೆಯದೇ ಸಂಕಷ್ಟಕ್ಕೀಡಾಗಬೇಕಾಗಿದೆ. ಸರಕಾರದಿಂದ ಪರಿಹಾರಕ್ಕೆ ಕೃಷಿಕರು ಈ ಹಿಂದೆ ಮನವಿ ಸಲ್ಲಿಸಿದ್ದರೂ ಜಿಲ್ಲಾ ಕೃಷಿ ಅಧಿಕಾರಿಗಳಲ್ಲಿ ಕೇಳಿದರೆ ಸರಕಾರದ ಎಸ್.ಡಿ.ಆರ್.ಎಫ್ ಮತ್ತು ಡಬ್ಲು.ಡಿ.ಆರ್.ಎಫ್ನಲ್ಲಿ ಫಂಡ್ ಇಲ್ಲವೆಂಬ ಸಬೂಬು ಇವರದು ಎಂದರು.ಆದುದರಿಂದ ರೈತರ ಸಾಲ ಮನ್ನ ಮಾಡಬೇಕು, ರೈತರಿಂದ ಬಲಾತ್ಕಾರವಾಗಿ ಸಹಕಾರಿ ಸಂಘಗಗಳು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ವಸೂಲಿ ಮಾಡಬಾರದು,ಉದ್ಯೋಗ ಖಾತರಿ ಯೋಜನೆಯ ಕೂಲಿಯಾಳುಗಳನ್ನು ಭತ್ತದ ಕೃಷಿಗೂ ವಿಸ್ತರಿಸಬೇಕು.ಹಾಲು ಉತ್ಪಾದಕರಿಗೆ ಮತ್ತು ರಬ್ಬರ್ ಉತ್ಪಾದಕರಿಗೆ ಬಾಕಿ ನೀಡಬೇಕಾದ ಸಬ್ಸಿಡಿ ಹಣವನ್ನು ಬಿಡುಗಡೆಗೊಳಿಸಬೇಕು. ಊರ ತಳಿಯ ದನ ಸಾಕಣೆಗೆ ಪೆÇ್ರೀತ್ಸಾಹ ನೀಡಬೇಕು. ತೆಂಗಿನ ಕಾಯಿ ಕೃಷಿ ಆಭಿವೃದ್ಧಿ ನಿಗಮ ನೀಡುತ್ತಿರುವ ರಸಗೊಬ್ಬರ ಮುಂತಾದ ಸವಲತ್ತುಗಳನ್ನು ಪುನ:ಆರಂಭಿಸಬೇಕು. ನದಿ ನೀರು ಎತ್ತುವ ಮತ್ತು ಕೃಷಿ ಉಪಯೋಗಕ್ಕೆ ಕೊರೆಯುವ ಬೋರ್ವೆಲ್ಗಳಿಗೆ ಸರಕಾರ ಅಡೆತಡೆಯನ್ನು ನಿವಾರಿಸಬೇಕು. ರೈತರ ಸಮಸ್ಯೆಗಳಿಗೆ ಸರಕಾರ ಕೂಡಲೇ ಸ್ಪಂದಿಸಿ ಪರಿಹಾರವನ್ನು ನೀಡಬೆಕೆಂದು ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು ಇದನ್ನು ಸರಕಾರ ತಕ್ಷಣ ಪರಿಹರಿಸಬೇಕೆಂದರು.
ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಕಿಸಾನ್ ಸಂಘದ ಪಾತ್ರ ಮತ್ತು ಕಾರ್ಯದ ಬಗ್ಗೆ ಚರ್ಚಿಸಿ ಈ ವರೆಗೆ ದೇಶವನ್ನು ಆಡಳಿತ ನಡೆಸಿದ ಪ್ರದಾನಿಗಳಲ್ಲಿ ನರೇಂದ್ರ ಮೋದಿಯವರು ಉಪಲಬ್ಧಿ ಉತ್ತಮಮ್ ಎಂಬ ಸಂಸ್ಕಾರ ಶ್ಲೋಕದಂತೆ ಉತ್ತಮರಾಗಿದ್ದು ದೇಶದ ಸುರಕ್ಷೆ ಭಷ್ಟಾಚಾರ ರಹಿತ ಆಡಳಿತ, ಸರ್ವರಿಗೂ ನ್ಯಾಯ, ಉತ್ತಮ ಯೋಜನೆಗಳನ್ನು ಜನತೆಗೆ ನೀಡಿರುವುದರಿಂದ ಮುಂದಿನ ಐದುವರ್ಷ ಆಡಳಿತ ನಡೆಸುವಲ್ಲಿ ಸಂಘದ ಸದಸ್ಯರು ಎನ್.ಡಿ.ಎ.ಗೆ ಮತ ನೀಡಬೇಕೆಂದು ಸಮಾವೇಶದಲ್ಲಿ ನಿರ್ಧರಿಸಲಾಯಿತು.
ಕಿಸಾನ್ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರ ಮಾಸ್ತರ್ ಉಳುವಾನ ಮಾತನಾಡಿ ಕಡಿಮೆ ವೆಚ್ಚದಲ್ಲಿ ಅಧಿಕ ಉತ್ಪಾದನೆ, ಮೋದಿಯವರ ತ್ಯಾಜ್ಯ ಮರುಬಳಕೆ ಯೋಜನೆಯ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಕಾರ್ಯದರ್ಶಿ ಕೊಮ್ಮಂಡ ಸದಾನಂದ ಶೆಟ್ಟಿಯವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ ವಿದೇಶದಲ್ಲಿರುವಂತೆ ಕೃಷಿಕರ ಎಲ್ಲಾ ಉತ್ಪನ್ನಗಳಿಗೂ ಕನಿಷ್ಟ ಬೆಂಬಲಬೆಲೆ ನೀಡುವ ಯೋಜನೆಯನ್ನು ಅಡಿಕೆ ರಬ್ಬರ್ ಭತ್ತ, ಕರಿಮೆಣಸಿಗೂ ವಿಸ್ತರಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ರಾಜ್ಯ ಉಪಾಧ್ಯಕ್ಷ ರಾಮ ಮಾಸ್ತರ್ ರೈತರ ಸಮಸ್ಯೆಗಳಿಗೆ ಕೂಡಲೇ ಸರಕಾರ ಸ್ಪಂದಿಸಿ ಅತಿ ವೃಷ್ಟಿಯಿಂದ ಹಾನಿಗೊಳಗಾದ ಭತ್ತ ಮತ್ತು ಅಡಿಕೆ ಕೃಷಿಕರಿಗೆ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದರು. ಜಿಲ್ಲಾಧ್ಯಕ್ಷ ನಾರಾಯಣನ್ ನಾಯರ್ ವನ್ನರ್ಕಾಯ ಆಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಶಂಕರನ್ ಟಿ.ಚೇರೂರು ವಂದಿಸಿದರು.