ಕುಂಬಳೆ: ಮಂಗಳೂರು ವಿಶ್ವವಿದ್ಯಾನಿಲಯದ 2018-19ನೇ ಸಾಲಿನ ಮಾಸ್ಟರ್ ಆಫ್ ಲೈಬ್ರರಿ ಆ್ಯಂಡ್ ಇನ್‍ಫಾರ್ಮೇಶನ್ ಸಯನ್ಸ್(ಎಂಎಲ್‍ಐಎಸ್‍ಸಿ) ಪರೀಕ್ಷೆಯಲ್ಲಿ ಕುಂಬಳೆಯ ಹರ್ಷಿತ ಕೆ.ಎಸ್.ಗಟ್ಟಿ ಪ್ರಥಮ ರ್ಯಾಂಕ್‍ನೊಂದಿಗೆ ಉತ್ತೀರ್ಣಳಾಗಿ ಚಿನ್ನದ ಪದಕ ಮತ್ತು ನಗದು ಬಹುಮಾನವನ್ನು ಪಡೆದಿದ್ದಾಳೆ.
ಈಕೆ ಕುಂಬಳೆ ದೇವಿನಗರ ಸಮೀಪದ ನೆಕ್ರಾಜೆಯ ಸುಬ್ಬ ಗಟ್ಟಿ ಮತ್ತು ರತ್ನಾವತಿ ದಂಪತಿಯ ಪುತ್ರಿ ಹಾಗೂ ಕುಂಬಳೆಯ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆ ಮತ್ತು ಜಿಎಚ್‍ಎಸ್ ಕುಂಬಳೆಯ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ.
ಈಕೆ ಕುಂಬಳೆ ದೇವಿನಗರ ಸಮೀಪದ ನೆಕ್ರಾಜೆಯ ಸುಬ್ಬ ಗಟ್ಟಿ ಮತ್ತು ರತ್ನಾವತಿ ದಂಪತಿಯ ಪುತ್ರಿ ಹಾಗೂ ಕುಂಬಳೆಯ ಹೋಲಿ ಫ್ಯಾಮಿಲಿ ಕಾನ್ವೆಂಟ್ ಶಾಲೆ ಮತ್ತು ಜಿಎಚ್‍ಎಸ್ ಕುಂಬಳೆಯ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ.