HEALTH TIPS

ವಿಷು ಕಣಿಯಿಟ್ಟು ವಿಷುವನ್ನು ಸ್ವಾಗತಿಸಿದ ತುಳುವರು ಕರ್ನಾಟಕ ಸರಕಾರ ಬಿಸು ಆಚರಣೆಗೆ ವಿಶೇಷ ಆಧ್ಯತೆ ನೀಡಬೇಕು- ರಾಮ್ ಪ್ರಸಾದ್ ಭಟ್ ಮಲಾರ್

                     
      ಮಂಗಳೂರು: ಬಿಸು ಪರ್ಬ ಆಚರಣೆ ಪ್ರಕೃತಿ ಆರಾಧನೆಯ ಒಂದು ಪ್ರತೀಕ. ಇದು ತುಳುನಾಡು ಮಾತ್ರವಲ್ಲದೆ ದೇಶದ ನಾನಾ ಕಡೆಗಳಲ್ಲಿ ಆಚರಿಸಲ್ಪಡುತ್ತದೆ. ಕೇರಳದಲ್ಲಿ ವಿಷು ಆಚರಣೆಗೆ ಸರಕಾರ ವಿಶೇಷ ಪ್ರಾತಿನಿಧ್ಯ ನೀಡಿದ್ದು ಹಬ್ಬದ ಮಹತ್ವವನ್ನು ಹೆಚ್ಚಿಸಿದೆ. ಅದೇ ರೀತಿಯಲ್ಲಿ ಕರ್ನಾಟಕ ಸರಕಾರವೂ ಕೂಡ ವಿಷುವಿಗೆ ಹೆಚ್ಚಿನ ಆದ್ಯತೆ ನೀಡಿಬೇಕು ಎಂದು ರಾಮ್ ಪ್ರಸಾದ್ ಭಟ್ ಮಲಾರ್ ಅಭಿಪ್ರಾಯಪಟ್ಟರು.
     ಅವರು ಕಾವೂರಿನ ಮುಗೆರೋಡಿ ಎನ್‍ಕ್ಲೇವ್‍ನಲ್ಲಿರುವ ಅಖಿಲ ಭಾರತ ತುಳು ಒಕ್ಕೂಟದ ಎಸ್.ಆರ್.ಹೆಗ್ಡೆ ಛಾವಡಿಯಲ್ಲಿ ತುಳುವೆರೆ ಆಯನೊ ಕೂಟ ಕುಡ್ಲ, ತುಳುವಲ್ರ್ಡ್  ಕುಡ್ಲ ಹಾಗೂ ಸ್ಪೂರ್ತಿ ಮಹಿಳಾ ಮಂಡಳಿ ಪದವಿನಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನಡೆದ ತುಳುನಾಡ ಹೊಸ ವರ್ಷ ಬಿಸು ಪರ್ಬ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
       ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ರಾಜೇಶ್ ಆಳ್ವ ವಿಶ್ವದ್ ಎಂಬ ಶಬ್ದದಿಂದ ವಿಷು ಎಂಬ ಶಬ್ದ ಹುಟ್ಟಿಕೊಂಡಿದೆ. ವಿಶ್ವದ್ ಎಂದರೆ ರಾತ್ರಿ ಹಾಗೂ ಹಗಲು ಸಮಾನವಾಗಿರುವ ದಿನ ಎಂದರ್ಥ. ವಿಷುವಿನ ದಿನ ಮಾತ್ರ ಆ ರೀತಿಯಿರುತ್ತದೆ. ಅದು ಸಮಾನತೆಯ ಸಂಕೇತ. ಆದುದರಿಂದ ವಿಷು ಸಮಾನತೆಯ ಹಬ್ಬ ಎಂದರು. ತುಳುವೆರೆ ಆಯನೊ ಕೂಟ ಕುಡ್ಲ ಇದರ ಅಧ್ಯಕ್ಷರಾದ ದಯಾನಂದ ಕತ್ತಲ್‍ಸಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಮಾಜಿ ಸದಸ್ಯೆ ರತ್ನಾವತಿ ಬೈಕಾಡಿ, ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಅಖಿಲ ಭಾರತ ತುಳು ಒಕ್ಕೂಟದ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಮೂಲ್ಕಿ, ಉಧ್ಯಮಿ ಯಾದವ ಕೋಟ್ಯಾನ್, ಕಲಾ ಕುಂಭ ಸಾಂಸ್ಕøತಿಕ ವೇದಿಕೆಯ ನಾಗೇಶ್ ಕುಲಾಲ್, ಯಕ್ಷಗಾನ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಸ್ಪೂರ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರಹಾಸ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ರತ್ನಾವತಿ ಬೈಕಾಡಿ, ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ವಿಲಿಯಂ ಮೆಂಡೋನ್ಸಾ ಅವರನ್ನು ಅಭಿನಂದಿಸಲಾಯಿತು. ಮಹೇಶ್ ಶೆಟ್ಟಿ ಸ್ವಾಗತಿಸಿ ಚೇತನ್ ವಂದಿಸಿದರು. ಹರ್ಷ ರೈ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು.
                 ಗಮನಾರ್ಹ: 
         ಜನಮನ ರಂಜಿಸಿದ ತುಳುವಾಲ ಬಲಿಯೇಂದ್ರ.
   ಪ್ರಸಿದ್ಧ ವಾಗ್ಮಿ, ತುಳುವೆರೆ ಆಯನೊ ಕೂಟ ಕುಡ್ಲ ದ ಅಧ್ಯಕ್ಷರಾದ ದಯಾನಂದ ಕತ್ತಲ್‍ಸಾರ್ ಸಂಯೋಜನೆಯಲ್ಲಿ ಮೂಡಿಬಂದ ತುಳುವಾಲ ಬಲಿಯೇಂದ್ರ ಯಕ್ಷಗಾನ ತಾಳಮದ್ದಲೆ ನೆರೆದ ಜನರ ಮನಗೆದ್ದಿತು. ಜಬ್ಬಾರ್ ಸಮೋ ಸಂಪಾಜೆ, ಸದಾಶಿವ ಆಳ್ವ ತಲಪಾಡಿ, ತುಳುವ ಬೊಳ್ಳಿ ದಯಾನಂದ ಕತ್ತಲ್‍ಸಾರ್ ಮುಮ್ಮೇಳದಲ್ಲಿ ಅರ್ಥದಾರಿಗಳಾಗಿ ಭಾಗವಹಿಸಿ ತಮ್ಮ ಜ್ನಾನ ಸುಧೆಯನ್ನೇ ಹರಿಯಬಿಟ್ಟರು. ತುಳು ಭಾಷೆಯ ಸೊಗಡು, ಸಾಹಿತ್ಯ ಪ್ರೌಢಿಮೆ ನೆರೆದ ಜನರನ್ನು ಮಂತ್ರಮಗ್ನರನ್ನಾಗಿಸಿತು. ಹಿಮ್ಮೇಳದಲ್ಲಿ ಭಾಗವತರಾಗಿ ಧೀರಜ್ ರೈ ಸಂಪಾಜೆ, ಚೆಂಡೆ-ಮದ್ದಳೆಯಲ್ಲಿ ಮಯೂರ್ ನಾಯ್ಗ, ಕೀರ್ತನ್ ನಾಯ್ಗ, ಚಕ್ರತಾಳದಲ್ಲಿ ಹರಿಶ್ಚಂದ್ರ ನಾಯ್ಗ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries