ಉಪ್ಪಳ: ಪುತ್ತೂರಲ್ಲಿ ಮಂಗಳವಾರ ವಿವಾಹಿತರಾಗಿರುವ ವಧು ಮದುವೆಗೆ ತೆರಳುವ ಮೊದಲು ಮತಗಟ್ಟೆಗೆ ತೆರಳಿ ಮತಚಲಾಯಿಸಿ ಆದರ್ಶ ಮೆರೆದ ವಿದ್ಯಮಾನ ಗಡಿ ಗ್ರಾಮ ಬೆರಿಪದವಿನಲ್ಲಿ ನಡೆದಿದೆ.
ಬಳ್ಳೂರು ಓಟೆಪಡ್ಪು ನಿವಾಸಿ ಗಣಪತಿ ಭಟ್-ರಮಾ ದಂಪತಿಗಳ ಪುತ್ರಿ ಡಾ.ಆಶಾರ ವಿವಾಹ ಮಂಗಳವಾರ ಪುತ್ತೂರಿನಲ್ಲಿ ನಡೆಯಿತು. ಮಂಗಳವಾರ ಬೆಳಿಗ್ಗೆ ಪುತ್ತೂರಿಗೆ ತೆರಳುವ ಮಧ್ಯೆ ಬೆರಿಪದವಿನಲ್ಲಿರುವ ವಿದ್ಯಾರಣ್ಯ ಅನುದಾನಿತ ಶಾಲೆಯಲ್ಲಿರುವ 12 ಸಂಖ್ಯೆಯ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿಹಿಡಿದು ಗಮನ ಸೆಳೆದರು.