ಆದೂರು ಕ್ಷೇತ್ರದಲ್ಲಿ ಶ್ರೀ ಭೂತಬಲಿ ಉತ್ಸವ ಸಮಾರೋಪ
0
ಏಪ್ರಿಲ್ 04, 2019
ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಶ್ರೀ ಭೂತಬಲಿ ಉತ್ಸವ ಕಾರ್ಯಕ್ರಮಗಳು ಸಮಾರೋಪಗೊಂಡಿತು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆ ಚಪ್ಪರ ಏರಿಸುವುದು, ಉಗ್ರಾಣ ತುಂಬಿಸುವುದು, ಗಣಪತಿಹೋಮ, ನವಕಾಭಿಷೇಕ, ತುಲಾಭಾರ ಸೇವೆ, ರಕ್ತೇಶ್ವರಿ ಮತ್ತು ವಿಷ್ಣುಮೂರ್ತಿ ದೈವಗಳಿಗೆ ತಂಬಿಲ, ರಂಗಪೂಜೆ, ಶ್ರೀ ದೇವರ ಭೂತಬಲಿ, ನೃತ್ತ, ಬೆಡಿಸೇವೆ, ಶ್ರೀ ದೇವರ ಭೂತಬಲಿ, ಭಗವತಿ ಸಂದರ್ಶನ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, ಗ್ರಾಮಾದಿ ದೈವಗಳ ಆರಾಧನೆ, ಆದೂರು ಶ್ರೀ ಭಗವತೀ ಕ್ಷೇತ್ರದಿಂದ ಭಗವತೀ ದರ್ಶನಕಾರರು ಆಗಮಿಸಿದ ಸಂದರ್ಭದಲ್ಲಿ ನಡೆಯುವ ದರ್ಶನಬಲಿ ವಿಶೇಷತೆಯನ್ನು ಪಡೆದಿದ್ದು ಸಾವಿರಾರು ಮಂದಿ ಭಕ್ತರು ಉಪಸ್ಥಿತರಿದ್ದರು.
ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಂಗಳವಾರ ಮಲ್ಲಾವರ ಪಂಚಲಿಂಗೇಶ್ವರ ಕೃಪಾಪೋಷಿತ ಯಕ್ಷಗಾನ ಕಲಾಸಂಘದವರಿಂದ ಯಕ್ಷಗಾನ ಬಯಲಾಟ ಪುಣ್ಯಕೋಟಿ-ಮಧೂರು ಕ್ಷೇತ್ರ ಮಹಾತ್ಮೆ, ಬುಧವಾರ ಕೊಯಕೂಡ್ಲು ಅಂಗನವಾಡಿ ಮಕ್ಕಳಿಂದ, ಮಲ್ಲಾವರ ಫ್ರೆಂಡ್ಸ್ ಕ್ಲಬ್ ಮತ್ತು ಸ್ಥಳೀಯರಿಂದ ನೃತ್ಯ ವೈವಿಧ್ಯ, ಮಲ್ಲಾವರ ಫ್ರೆಂಡ್ಸ್ ಕ್ಲಬ್ ವತಿಯಿಂದ ಮಂಜೇಶ್ವರ ಶಾರದಾ ಆಟ್ರ್ಸ್ ಕಲಾವಿದರಿಂದ ತುಳು ನಾಟಕ ಇತ್ತ್‍ನಾತ್ ದಿನ ನಡೆಯಿತು.
ಒತ್ತೆಕೋಲ ಮಹೋತ್ಸವದ ಅಂಗವಾಗಿ ಏ.4 ರಂದು ಪ್ರಾತಃ ಕಾಲ 5ರಿಂದ ಶ್ರೀ ವಿಷ್ಣುಮೂರ್ತಿ ದೈವದ ಕೆಂಡಸೇವೆ ನಡೆಯಿತು.