ಕುಂಜತ್ತೂರು-ವರ್ಷಾವಧಿ ನೇಮೋತ್ಸವಕ್ಕೆ ವಿದ್ಯುಕ್ತ ಚಾಲನೆ
0
ಏಪ್ರಿಲ್ 04, 2019
ಮಂಜೇಶ್ವರ: ಕುಂಜತ್ತೂರು ಶ್ರೀನಾಗಬ್ರಹ್ಮ, ಉಳ್ಳಾಲ್ತಿ, ಕೋಮರಾಯ, ಚಾಮುಂಡೇಶ್ವರಿ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ನೇಮೋತ್ಸವಕ್ಕೆ ಬುಧವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಬುಧವಾರ ಉದ್ಯಾವರದ ಶಾಸ್ತಾವೇಶ್ವರ ಕ್ಷೇತ್ರ ಬಳಿಯಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಯಾವರ ಅರಸು ಮಂಜಿಷ್ಣಾರು ದೈವ ಕ್ಷೇತ್ರದ ಅಣ್ಣದೈವ ಪಾತ್ರಿ ರಾಜ ಬೆಳ್ಚಪ್ಪಾಡ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಸಂಜೀವ ಶೆಟ್ಟಿ ಉದ್ಯಾವರ ಮಾಡ, ಹರೀಶ್ ಶೆಟ್ಟಿ ಮಾಡ, ಯಾದವ ಕೀರ್ತೇಶ್ವರ, ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.