ಯುವ ರಂಗನಟ-ನಿರ್ದೇಶಕ ಕಿರಣ್ ಕಲಾಂಜಲಿ ಅವರಿಗೆ ರಂಗದಿನಾಚರಣೆ ಸನ್ಮಾನ
0
ಏಪ್ರಿಲ್ 01, 2019
ಕಾಸರಗೋಡು: ವಿಶ್ವ ರಂಗಭೂಮಿ ದಿನಾಚರಣೆಯ ಅಂಗವಾಗಿ ಬುಧವಾರ ಸಂಜೆ ಕಾಸರಗೋಡು ಪಾರೆಕಟ್ಟೆಯ ರಂಗ ಕುಟೀರದಲ್ಲಿ ಆಯೋಜಿಸಿದ್ದ ರಂಗಭೂಮಿ ದಿನಾಚರಣೆ ಸಮಾರಂಭದಲ್ಲಿ ಯುವ ರಂಗಕರ್ಮಿ ಕಿರಣ್ ಕಲಾಂಜಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮಾತನಾಡಿದ ರಂಗ ಕುಟೀರದ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅವರು, ಹೊಸ ತಲೆಮಾರಿಗೆ ಮಾದರಿಯಾಗಿ ಕಿರಣ್ ಕಲಾಂಜಲಿ ಅವರು ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಅವರ ಅಪಾರ ಶ್ರದ್ದೆಯ ಸಂಕೇತವಾಗಿದೆ. ಹೊಸ ಪ್ರಯೋಗಗಳ ಮೂಲಕ ನೂತನ ರಂಗಾವಿಷ್ಕಾರ ಸಾಧ್ಯತೆಗಳನ್ನು ತೆರೆದಿಡುವ ಅವರ ರಂಗ ಚಳವಳಿ ನಿಜಕ್ಕೂ ಸ್ತುತ್ಯರ್ಹವಾದುದು ಎಂದು ತಿಳಿಸಿದರು.
ಹಿರಿಯ ರಂಗ-ಚಿತ್ರ ನಿರ್ದೇಶಕ ಲಯನ್.ಕಿಶೋರ್ ಡಿ.ಶೆಟ್ಟಿ, ಹಿರಿಯ ರಂಗನಟ ಸುಬ್ಬಣ್ಣ ಶೆಟ್ಟಿ, ನ್ಯಾಯವಾದಿ ಜಯರಾಜ್, ಜಯಚಂದ್ರನ್, ಪುಷ್ಪರಾಜ್ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಟಿ.ವಿ.ಗಂಗಾಧರನ್, ಪುರುಷೋತ್ತಮ, ಭಾರತೀಬಾಬು, ಸನ್ನಿ ಅಗಸ್ಟಿನ್, ದಿವಾಕರ ಅಶೋಕನಗರ, ಜಾಹ್ನವಿ, ದಯಾ ಪಿಲಿಕುಂಜೆ, ಮಧುಸೂದನ ಬಲ್ಲಾಳ್, ಬಾಲರಾಜ್, ಉದಯ ಸಾರಂಗ್, ಮೋಹಿನಿ, ಶಶಿಧರ ಎದುರ್ತೋಡು, ಜಯಂತಿ ಸುವರ್ಣ, ಚಂದ್ರಹಾಸ ಕೈಯ್ಯಾರು, ಸುರೇಶ್ ಬೇಕಲ್, ಸುಂದರ ಮವ್ವಾರು ಮೊದಲಾದವರು ಉಪಸ್ಥಿತರಿದ್ದರು.ಈ ಸಂದರ್ಭ ಕಿರಣ್ ಕಲಾಂಜಲಿ ಅವರು ವಿರಾಟ್ ಏಕಾಂಕ ನಾಟಕ ಪ್ರದರ್ಶಿಸಿದರು. ಅಶ್ವಿನಿ ಪಿ.ಯು.ಸ್ವಾಗತಿಸಿ, ನಶ್ಮಿತಾ ಕಮಲೇಶ್ ವಂದಿಸಿದರು.