ನೀರ್ಚಾಲಿನಲ್ಲಿ ಪ್ರತಿರುದ್ರ ಭಜನಾ ರಾಮಾಯಣ ಮತ್ತು ಕುಂಕುಮಾರ್ಚನೆ
0
ಏಪ್ರಿಲ್ 06, 2019
ಬದಿಯಡ್ಕ: ಮುಳ್ಳೇರಿಯಾ ಮಂಡಲ ಪೆರಡಾಲ ವಲಯದ ನೀರ್ಚಾಲು ಸಮೀಪದ ಏಣಿಯರ್ಪಿನಲ್ಲಿರುವ ಕಿಳಿಂಗಾರು ವೇ.ಮೂ. ಬಾಲಕೃಷ್ಣ ಪ್ರಸಾದರ ನಿವಾಸ ಈಶಾವಾಸ್ಯಂ ನಲ್ಲಿ ಶ್ರೀಮಠ ರಕ್ಷಾತ್ಮಕವಾದ ಧಾರ್ಮಿಕ ಕಾರ್ಯಕ್ರಮವು ಶನಿವಾರ ಸಂಪನ್ನವಾಯಿತು.
ಮಹಾ ಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು ಧ್ವಜಾರೋಹಣಗೈದು ಚಾಲನೆ ನೀಡಿದರು. ಶಂಖನಾದ ಗುರುವಂದನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು.
ಮಂಗಳೂರು ಉಪ್ಪಿನಂಗಡಿ ಮುಳ್ಳೇರಿಯಾ ಹವ್ಯಕ ಮಂಡಲಗಳ ರುದ್ರಾಧ್ಯಾಯಿಗಳಿಂದ ಪ್ರದೋಷ ಪ್ರತಿರುದ್ರ ಪಠಣವು ಜರಗಿತು. ಮಾತೃ ವಿಭಾಗದವರಿಂದ ಭಜನಾ ರಾಮಾಯಣ ಮತ್ತು ಕುಂಕುಮಾರ್ಚನೆಯು ನಡೆಯಿತು.
ಪ್ರದೋಷ ಕಾಲದಲ್ಲಿ ರುದ್ರಾಧ್ಯಾಯಿಗಳ ಸಹಯೋಗದಲ್ಲಿ ಮನೆಯವರ ನೇತೃತ್ವದಲ್ಲಿ ಶ್ರೀರುದ್ರಕಲ್ಪದಲ್ಲಿ ವಿಧಿಸಿರುವಂತೆ ವಿವಿಧ ದ್ರವ್ಯಗಳಿಂದ ಪ್ರದೋಷ ರುದ್ರಾಭಿಷೇಕ ಪೂರ್ವಕ ಶಂಕರನಾರಾಯಣ ಪೂಜೆಯು ಈ ಸಂದರ್ಭ ನೆರವೇರಿತು.