ಕುಂಬಳೆ: ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಯೇಸುವಿನ ಅಂತ್ಯ ಭೋಜನ ಸ್ಮರಣಾರ್ಥ ದಿವ್ಯಬಲಿಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಯೇಸುವಿನ ಅಂತ್ಯ ಭೋಜನ ದಿನ ಕ್ರೈಸ್ತರಿಗೆ ತ್ರಿವಳಿ ಹಬ್ಬದ ಸಂಭ್ರಮ. ನಿನ್ನನ್ನು ಪ್ರೀತಿಸಿದಂತೆ ನಿನ್ನ ಪರರನ್ನು ಪ್ರೀತಿಸು ಎಂದ ಯೇಸು, ಸೇವೆ ಹಾಗೂ ಪ್ರೀತಿಯ ಸಂದೇಶವನ್ನು ಜಗತ್ತಿಗೆ ನೀಡಿದ ದಿನ. ಈ ದಿನವನ್ನು ದಿವ್ಯಬಲಿ ಪೂಜೆ ಆರಂಭಗೊಂಡ ದಿನವಾಗಿ ಆಚರಿಸಲಾಗುತ್ತದೆ. ಯಾಜಕೀ ದೀಕ್ಷೆ ರೂಪುಗೊಂಡಿದ್ದು ಈ ದಿನವೇ ಆಗಿದೆ.
ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿಯಲ್ಲಿ ಯೇಸುವಿನ ಅಂತ್ಯ ಭೋಜನ ಸ್ಮರಣಾರ್ಥ ಗುರುವಾರ ಸಂಭ್ರಮದ ದಿವ್ಯಬಲಿಪೂಜೆ ನಡೆಯಿತು.
ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ದಿವ್ಯಬಲಿಪೂಜೆ ನೆರವೇರಿಸಿದರು. ಬಲಿಪೂಜೆ ಸಂದರ್ಭ ಯೇಸು ಶಿಷ್ಯಂದಿರ ಕಾಲು ತೊಳೆದ ನೆನಪಿಗೆ ಹನ್ನೆರಡು ಮಂದಿಯ ಪಾದಗಳನ್ನು ತೊಳೆಯುವ ವಿಧಿವಿಧಾನ ನಡೆಯಿತು. ಬಲಿಪೂಜೆ ಬಳಿಕ ವಿಶ್ರಾಂತಿ ವೇದಿಕೆಗೆ ಕೊಂಡೊಯ್ಯಲಾದ ಪರಮ ಪ್ರಸಾದದ ಸುದೀರ್ಘ ಆರಾಧನೆ ಜರಗಿತು. ಶುಭ ಶುಕ್ರವಾರದ ಅಂಗವಾಗಿ ಪೆರ್ಮುದೆ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ಎ.19ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಿಗ್ಗೆ ಇಗರ್ಜಿಯ ತೆರೆದ ಮೈದಾನದಲ್ಲಿ ಶಿಲುಬೆ ಹಾದಿ ನಡೆಯಿತು. ಸಂಜೆ ಪವಿತ್ರ ಬೈಬಲ್ ವಾಚನ, ಆಶೀರ್ವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.