ಉಪ್ಪಳ: ಕುಳೂರು ಕೊಡಿಮಾರ್ ಶ್ರೀ ವನಶಾಸ್ತವೇಶ್ವರ ದೇವಸ್ಥಾನದಲ್ಲಿ ಏ.20ರಂದು ಪ್ರತಿಷ್ಠಾ ವರ್ಧಂತಿ, ನಾಗದರ್ಶನ ಹಾಗೂ ಬಲಿವಾಡು ಕೂಟ ನಡೆಯಲಿದೆ.
ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಕೊಂಡೆವೂರು ಮಾರ್ಗದರ್ಶನದಲ್ಲಿ ಹರಿನಾರಾಯಣ ಕಲ್ಯಾಣಾತ್ತಾಯರ ಉಪಸ್ಥಿತಿಯಲ್ಲಿ, ತಂತ್ರಿವರ್ಯರಾದ ರಾಮ್ ಪ್ರಸಾದ್ ನಲ್ಲೂರಾಯರ ನೇತೃತ್ವದಲ್ಲಿ ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ.
ಏ.21ರಂದು ಬೆಳಗ್ಗೆ 7ಕ್ಕೆ ಗಣಹೋಮ, ಪ್ರಧಾನ ಹೋಮ, ನವಕ ಕಲಶ, ನಾಗದೇವರು ಮತ್ತು ಪರಿವಾರ ದೈವಗಳಿಗೆ ತಂಬಿಲ, ಮಧ್ಯಾಹ್ನ 12ಕ್ಕೆ ಶ್ರೀ ಗೋಪಾಲಕೃಷ್ಣ ಸಾಮಗ ಉಡುಪಿ ಇವರಿಂದ ನಾಗದರ್ಶನ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ 7ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ಜರುಗಲಿದೆ.