HEALTH TIPS

ಪ್ರಥಮ ಹಂತದ ಮತದಾನ-ತೆಲಂಗಾಣ: ನಿಜಾಮಾಬಾದ್ ನಲ್ಲಿ ಅತಿ ಹೆಚ್ಚು ಇವಿಎಂ ಬಳಕೆ, ಗಿನ್ನೀಸ್ ದಾಖಲೆ ಸೇರುವ ಸಾಧ್ಯತೆ!

     
     ಹೈದ್ರಾಬಾದ್: ತೆಲಂಗಾಣದ ರಾಜ್ಯದ 17 ಲೋಕಸಭಾ ಕ್ಷೇತ್ರಗಳಿಗೆ ಮೊನ್ನೆ ಮತದಾನ ನಡೆಯಿತು. ಈ ಪೈಕಿ  ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಳಸಿದ ವಿದ್ಯನ್ಮಾನ ಮತಯಂತ್ರ(ಇವಿಎಂ)ಗಳ ಸಂಖ್ಯೆ ಗಿನ್ನೀಸ್ ದಾಖಲೆಗೆ ಸೇರ್ಪಡೆಯಾಗುವ ಸಾಧ್ಯೆತೆಯಿದೆ.
    ಈ ಕ್ಷೇತ್ರದ ಕಣದಲ್ಲಿ ಒಟ್ಟು 185 ಅಭ್ಯರ್ಥಿಗಳಿದ್ದರು, ಇವರು ಬಹುತೇಕ ರೈತರಾಗಿದ್ದರು. ಇದರಿಂದ ಚುನಾವಣಾ ಆಯೋಗ ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂಗಳನ್ನು ಬಳಸುವಂತಾಯಿತು.
    ನಿಜಾಮಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಅತಿಹೆಚ್ಚಿನ ಅಭ್ಯರ್ಥಿಗಳು ಸ್ಪರ್ಧಿಸುವ ಮೂಲಕ, ದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಇವಿಎಂ ಬಳಸಿದ ದೇಶದ ಮೊದಲ ಲೋಕಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
    ಸಾಮಾನ್ಯವಾಗಿ ಮತಗಟ್ಟೆಯೊಂದರಲ್ಲಿ ಒಂದು ಅಥವಾ ನಾಲ್ಕು ಇವಿಎಂಗಳಿಗೆ ಒಂದು ನಿಯಂತ್ರಣ ಘಟಕ ಹೊಂದಿರುತ್ತದೆ. ಆದರೆ ನಿಜಾಮಬಾದ್ ಲೋಕಸಭಾ ಕ್ಷೇತ್ರದ 1,778 ಮತಗಟ್ಟೆಗಳ ಪೈಕಿ ಪ್ರತಿಯೊಂದು ಮತಗಟ್ಟೆಯಲ್ಲಿ 12 ಇವಿಎಂಗಳನ್ನು ಒಂದು ನಿಯಂತ್ರಣ ಘಟಕಕ್ಕೆ ಜೋಡಿಸಲಾಗಿತ್ತು.
   ಪ್ರತಿಯೊಂದು ಇವಿಎಂನಲ್ಲಿ ಗರಿಷ್ಟ 16 ಅಭ್ಯರ್ಥಿಗಳನ್ನು ಒಳಗೊಂಡ, ಎಂ3 ಅವೃತ್ತಿಯ 12 ಇವಿಎಂಗಳನ್ನು ಎಲ್ ನಮೂನೆಯಲ್ಲಿ ಮತಗಟ್ಟೆಗಳನ್ನು ಜೋಡಿಸಿ, ಮತದಾನಕ್ಕೆ ಅವಕಾಶ ನೀಡಲಾಗಿತ್ತು.
     ಸಾಂಬಾರ ಪದಾರ್ಥವಾದ ಅರಸಿನ ಹಾಗೂ ಕೆಂಪು ಜೋಳಕ್ಕೆ ಕನಿಷ್ಟ ಬೆಂಬಲ ಬೆಲೆ ಘೋಷಿಸಬೇಕೆಂದು ಆಗ್ರಹಿಸಿ, 178 ರೈತರು ನಾಮಪತ್ರಸಲ್ಲಿಸಿದ ಕಾರಣ ಚುನಾವಣಾ ಆಯೋಗಕ್ಕೆ ಎಲ್ಲ ಅಭ್ಯರ್ಥಿಗಳನ್ನು ಇವಿಎಂಗಳಲ್ಲಿ ನಮೋದಿಸುವುದು ದೊಡ್ಡ ಸವಾಲಿನ ವಿಷಯವಾಗಿತ್ತು.
   185 ಅಭ್ಯರ್ಥಿಗಳು ಕಣದಲ್ಲಿರುವ ಕಾರಣ, ಬ್ಯಾಲೆಟ್ ಪೇಪರ್ ವ್ಯವಸ್ಥೆಯ ಮೊರೆ ಹೋಗಲು ಆರಂಭದಲ್ಲಿ ಚಿಂತಿಸಿತ್ತು. ಆದರೆ ನೂತನ ತಂತ್ರ????ನ ಬಳಸಿ ಹೆಚ್ಚಿನ ಇವಿಎಂ ಬಳಸಿ ಚುನಾವಣೆಯನ್ನು ಸುಸೂತ್ರವಾಗಿ  ನೆರವೇರಿಸುವ ಮೂಲಕ ದೇಶದ ಮೆಚ್ಚುಗೆಗೆ ಪಾತ್ರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries