ಕ್ರಿಮಿನಲ್ ಕೇಸುಗಳಲ್ಲಿ ಶಾಮೀಲಾಗಿರುವ ಅಭ್ಯರ್ಥಿಗಳು ಟಿ.ವಿ.ಚಾನೆಲ್ ಗಳಲ್ಲಿ ಜಾಹೀರಾತು ನೀಡಲು ಆಯೋಗ ನಿರ್ದೇಶನ
0
ಏಪ್ರಿಲ್ 01, 2019
ಕಾಸರಗೋಡು: ಲೀಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ಯಾರಾದರೂ ಕ್ರಿಮಿನಲ್ ಕೇಸುಗಳಲ್ಲಿ ಶಾಮೀಲಾಗಿದ್ದರೆ, ಆ ಕುರಿತು ಟಿ.ವಿ.ಚಾನೆಲ್ ಗಳಲ್ಲಿ ಜಾಹೀರಾತು ನೀಡಲು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.
ಏ.12,16,21 ಎಂಬ ದಿನಾಂಕಗಲಲ್ಲಿ ಚುನಾವಣೆ ನಡೆಯುತ್ತಿರುವ ಪ್ರದೇಶಗಳಲ್ಲಿ ಪ್ರಚಾರದಲ್ಲಿರುವ ಟಿ.ವಿ.ಚಾನೆಲ್ ಗಳಲ್ಲಿ ಜಾಹೀರಾತು ನೀಡಬೇಕು. ಜಾಹೀರಾತು ಸ್ಥಳೀಯ ಭಾಷೆಯಲ್ಲಿರಬೇಕು. ಬೆಳಗ್ಗೆ 8ರಿಂದ ರಾತ್ರಿ 10 ಗಮಟೆಯ ಅವಧಿಯಲ್ಲಿ ಜಾಹೀರಾತು ಪ್ರಕಟಗೊಳ್ಳಬೇಕು. ಸೂಕ್ತರೀತಿ ಪ್ರೇಕ್ಷಕರು ಗಮನಿಸುವ ರೀತಿ ಕನಿಷ್ಠ 7 ಸೆಕೆಂಡ್ ಅವಧಿಯಲ್ಲಿ ಜಾಹೀರಾತು ಸ್ಕ್ರೀನ್ ನಲ್ಲಿ ಪ್ರಸ್ತುಗೊಳ್ಳಬೇಕು. ಜೊತೆಗೆ ಏ.12,16,21 ಎಂಬ ದಿನಾಂಕಗಳಲ್ಲಿ ಜಿಲ್ಲಾ ಚುನಾವಣೆ ಅಧಿಕಾರಿ ನಿಗದಿಪಡಿಸಿರುವ ಪತ್ರಿಕೆಗಳಲ್ಲಿ ಕೇಸುಗಳಿಗೆ ಸಂಬಂಧಿಸಿದ ಮಾಹಿತಿ ಪ್ರಕಟಿಸಬೇಕು. ಪ್ರಕಟಿಸಿರುವ ವಿಚಾರಗಳಿಗೆ ಸಂಬಂಧಿಸಿ ದೂರುಗಳಿದ್ದಲ್ಲಿ ಸಾರ್ವಜನಿಕರು 500ರೂ. ಮೌಲ್ಯದ ಛಾಪಪತ್ರದಲ್ಲಿ ಸತ್ಯ ಪ್ರತಿಜ್ಞೆ ಸಮರ್ಪಿಸಲು ಚುನಾವಣಾ ಅಧಿಉಕಾರಿಗಳು ನಿರ್ದೇಶನ ನೀಡಿದ್ದಾರೆ.