ಕಾಸರಗೋಡು: ಕೃಷಿ ಸಾಲಗಳಿಗಿರುವ ಮೊರಟೋರಿಯಂ ಘೋಷಿಸಲಿರುವ ರಾಜ್ಯ ಸರಕಾರದ ಪ್ರಯತ್ನಕ್ಕೆ ತಿರುಗೇಟು ಉಂಟಾಗಿದೆ. ಮೊರಟೋರಿಯಂಗೆ ಸಂಬಂಧಿಸಿದ ಕಡತಗಳನ್ನು ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಬೇಕಾಗಿಲ್ಲವೆಂದು ಮುಖ್ಯ ಚುನಾವಣಾ ಅಧಿಕಾರಿ ನಿರ್ಧರಿಸಿದ್ದಾರೆ.
ಸರಕಾರ ಮತ್ತೆ ಮತ್ತೆ ಒಂದೇ ಸ್ಪಷ್ಟೀಕರಣವನ್ನು ನೀಡುತ್ತಿದೆಯೆಂಬುವುದೇ ಕಡತವನ್ನು ಮತ್ತೆ ಕಳುಹಿಸಕೊಡದಿರಲು ಕಾರಣವಾಗಿದೆ. ಈ ಸ್ಪಷ್ಟೀಕರ ತೃಪ್ತಿಕರವಲ್ಲವೆಂದೂ ಮತ್ತೆ ಹಳೆಯ ವಿಷಯಗಳನ್ನು ಕೇಂದ್ರ ಚುನಾವಣಾ ಆಯೋಗದ ಮುಂದಿರಿಸಿದೆ ಅದಕ್ಕೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಯೊಂದಿಗೆ ಆಯೋಗ ಸ್ಪಷ್ಟೀಕರಣ ಕೇಳುವ ಸಾಧ್ಯತೆ ಇದೆ. ಆದ್ದರಿಂದಲೇ ಕಡತವನ್ನು ಮತ್ತೆ ಕಳುಹಿಸದಿರಲು ಟೀಕಾರಾಂ ಮೀಣ ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.
ತುರ್ತಾಗಿ ಮೊರಟೋರಿಯಂ ಘೋಷಿಸಲಿರುವ ಕಾರಣವೇನು, ಹಾಗೆ ತುರ್ತು ಅವಶ್ಯಕತೆಯಿದ್ದರೆ ಯಾಕಾಗಿ ಈ ಹಿಂದೆ ಘೋಷಿಸಿಲ್ಲ ಎಂಬೀ ಪ್ರಶ್ನೆಗಳನ್ನು ಚುನಾವಣಾ ಆಯೋಗ ರಾಜ್ಯ ಸರಕಾರದ ಮುಂದಿರಿಸಿದೆ.
ಕಡತಗಳನ್ನು ಮತ್ತೆ ಚುನಾವಣಾ ಆಯೋಗಕ್ಕೆ ಸಲ್ಲಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕೊನೆಗೊಳ್ಳುವ ವರೆಗೆ ಸರಕಾರಕ್ಕೆ ಕೃಷಿಕರ ಸಾಲಗಳಿಗಿರುವ ಮೊರಟೋರಿಂ ಘೋಷಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕೃಷಿಕರ ಆತ್ಮಹತ್ಯೆ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮಾರ್ಚ್ 5 ರಂದು ಸೇರಿದ ಸಚಿವ ಸಂಪುಟ ಸಭೆ ಕೈಗೊಂಡ ನಿರ್ಧಾರವನ್ನು ನೀತಿ ಸಂಹಿತೆ ಕಾರಣದಿಂದ ಘೋಷಿಸಲಾಗಲಿಲ್ಲ.