ಬದಿಯಡ್ಕ: ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯ ಹಿಮ್ಮೇಳ ತರಗತಿಯ ವಿದ್ಯಾರ್ಥಿನಿ ವಿದ್ಯಾ ಕುಂಟಿಕಾನಮಠ ಅವರು ಕುಂಟಿಕಾನಮಠದ ಶ್ರೀ ಶಂಕರನಾರಾಯಣ ದೇವರ ಸನ್ನಿಧಿಯಲ್ಲಿ ಭಾಗವತಿಕೆಯ ಕ್ಷೇತ್ರಕ್ಕೆ ಪ್ರವೇಶಿಸಿದರು.
ಶ್ರೀ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ತಿಂಗಳ ದುರ್ಗಾ ಪೂಜೆಯ ಸಂದರ್ಭದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಭಾಗವತಿಕೆ ಮಾಡುವ ಮೂಲಕ ಭಾಗವತೆಯಾಗಿ ಯಕ್ಷರಂಗದ ಮತ್ತೊಂದು ಮಜಲನ್ನು ಪ್ರವೇಶಿಸಿದರು. ಇವರು ಈಗಾಗಲೇ ಬಾಯಾರಿನ ಸೂರ್ಯನಾರಾಯಣ ಪದಕಣ್ಣಾಯರಿಂದ ಬದಿಯಡ್ಕದ ರಂಗಸಿರಿ ಸಾಂಸ್ಕøತಿಕ ವೇದಿಕೆಯಲ್ಲಿ ಯಕ್ಷಗಾನ ನಾಟ್ಯ ಕಲಿತು ಕಲಾವಿದೆಯಾಗಿ ಮೆರೆಯುತ್ತಿದ್ದಾರೆ. ಇದೀಗ ರಂಗಸಿರಿಯಲ್ಲೇ ಭಾಗವತಿಕೆಯನ್ನೂ ಕಲಿತ ಇವರು, ಹೆಚ್ಚಿನ ಅಧ್ಯಯನವನ್ನು ನಡೆಸುತ್ತಿದ್ದಾರೆ. ಚೆಂಡೆಯಲ್ಲಿ ವಾಸುದೇವ ಕಲ್ಲೂರಾಯ ಮಧೂರು ಹಾಗೂ ಮದ್ದಳೆಯಲ್ಲಿ ಯಕ್ಷಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಸಹಕರಿಸಿದರು. ಬಾಲಗೋಪಾಲ ಪಾತ್ರಧಾರಿಗಳಾಗಿ ರಂಗಸಿರಿಯ ವಿದ್ಯಾರ್ಥಿಗಳಾದ ಅಭಿಜ್ಞಾ ಭಟ್ ಹಾಗೂ ವರ್ಷಾ ಲಕ್ಷ್ಮಣ್ ರಂಗದಲ್ಲಿ ಮೆರೆದರು. ಕೆ.ಎಂ.ಶ್ಯಾಮ ಭಟ್ ಸ್ವಾಗತಿಸಿ, ವೆಂಕಟೇಶ್ವರ ಭಟ್ ವಂದಿಸಿದರು.