ಕಾಸರಗೋಡು: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭ ಸಾಮೂಹಿಕ ಜಾಲತಾಣಗಳ ಮೂಲಕ ಮತಗಿಟ್ಟಿಸುವಿಕೆ ಮತ್ತು ವಿಮರ್ಶೆ ಇತ್ಯಾದಿಗಳ ಸೂಕ್ಷ್ಮ ನಿಗಾ ಇರಿಸಲಾಗುತ್ತಿದೆ. ಚುನಾವಣೆ ಆಯೋಗದ ಆದೇಶ ಪ್ರಕಾರ ರಚಿಸಿದ ಮೀಡಿಯಾ ಅರ್ಟಿಫಿಕೇಷನ್ ಆಂಡ್ ಮೋನಿಟರಿಂಗ್ ಸಮಿತಿ ಈ ನಿಗಾ ಇರಿಸಿದೆ. ಮುದ್ರಣ, ದೃಶ್ಯ, ಶ್ರವ್ಯ ಮಾಧ್ಯಮಗಳಲ್ಲದೆ ಫೆಸ್ ಬುಕ್, ಟ್ವಿಟರ್, ವಾಟ್ಸ್ ಅಪ್, ವೆಬ್ ಸೈಟ್ ಗಳು, ಎಸ್.ಎಂ.ಎಸ್.ಗಳು ಇತ್ಯಾದಿ ಗಳನ್ನೂ ನಿರಿಕ್ಷಿಸಲಾಗುತ್ತಿದೆ. ಸಾಮೂಹಿಕ ಮಾಧ್ಯಮಗಳಲ್ಲಿ ಅಭ್ಯರ್ಥಿಗಳ ಅವಹೇಳನ ನಡೆಸುವಂಥಾ ವಿಮರ್ಶೆಗಳು, ಭಾಷಣಗಳು, ಅಸಭ್ಯ ಕಮೆಂಟ್ ಇತ್ಯಾದಿ ನಡೆಸುವುದು ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಸಾಮೂಹಿಕ ಜಾಲತಾಣಗಳ ಕುರಿತು ನಿಗಾ
0
ಏಪ್ರಿಲ್ 13, 2019