ಅಬಕಾರಿ ವಿಭಾಗೀಯ ಕಚೇರಿ ಇನ್ನು ಕಾಗದ ರಹಿತ : ಇ-ಆಫೀಸ್ ಆರಂಭ
0
ಏಪ್ರಿಲ್ 01, 2019
ಕಾಸರಗೋಡು: ಕಾಸರಗೋಡು ವಿಭಾಗೀಯ ಅಬಕಾರಿ ಕಚೇರಿ ಇನ್ನು ಕಾಗದ ರಹಿತ. ಅಬಕಾರಿ ಇಲಾಖೆಯ ಇ-ಆಫೀಸ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರಂಭಗೊಂಡಿದೆ. ಸೋಮವಾರ ಈ ಸಂಬಂಧ ನಡೆದ ಸಮಾರಂಭವನ್ನು ಅಬಕಾರಿ ಇಲಾಖೆ ಕಮೀಷನರ್ ಋಷಿರಾಜ್ ಸಿಂಗ್ ಉದ್ಘಾಟಿಸಿದರು. ಈ ಸಂಬಂಧ ಮಾತನಾಡಿದ ಅವರು ಇ-ಆಫೀಸ್ ಜಾರಿಗೊಳ್ಳುವ ಮೂಲಕ ಸಾರ್ವಜನಿಕರು ಅಬಕಾರಿ ಸೇವೆಗಳನ್ನು ಆನ್ ಲೈನ್ ಸೌಲಭ್ಯ ಮೂಲಕ ಪಡೆದುಕೊಳ್ಳುವಂತಾಗಿದೆ ಎಂದರು.
ಚುನಾವಣೆ ಸಂಬಂಧ ಮದ್ಯ-ಅಬಕಾರಿ ಅಕ್ರಮ ಸಾಗಾಟ ವಿರುದ್ಧ ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ವತಿಯಿಂದ ನಡೆಯುವ ಚಟುವಟಿಕೆಗಳ ಕುರಿತು ಅವರು ಚರ್ಚಿಸಿದರು.
ಹೆಚ್ಚುವರಿ ಕಮೀಷನರ್ ಜೇಕಬ್ ಜೋನ್, ಸಹಾಯಕ ಕಮೀಷನರ್ ಮೋಹನ್ ಕುಮಾರ್, ಸಿ.ಐ.ಮಧುಸೂದನನ್ ಮೊದಲಾದವರು ಉಪಸ್ಥಿತರಿದ್ದರು.
ಇ-ಆಫೀಸ್ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಕಚೇರಿ ದಾಖಲೆಗಳೆಲ್ಲವನ್ನೂ ಇ-ಫೈಲ್ ಗಳಾಗಿಸಲಗುವುದು. ಮುಂದುವರಿಯುವ ಕ್ರಮಗಳನ್ನು ಕೈಗೊಳ್ಳುವ, ಕಚೇರಿಗೆ ಲಭಿಸುವ ದೂರುಗಳನ್ನು , ಟಪಾಲುಗಳನ್ನು ಆರಂಬದಲ್ಲೇ ಸ್ಕ್ಯಾನ್ ನಡೆಸಿ ಸಂಬಂಧಪಟ್ಟ ಸಿಬ್ಬಂದಿಗೆ ಕಂಪ್ಯೂಟರ್ ಮೂಲಕ ಹಸ್ತಾಂತರಿಸಲಾಗುವುದು, ಆಯುರ್ವೇದ ಔಷಧಗಳಿಗೆ ಸಂಬಂಧಪಟ್ಟ ಪರವಾನಗಿ, ಬಾರ್ ಪರವಾನಗಿ ಸಹಿತ 23 ಸೇವೆಗಳಿಗೆ ಇನ್ನು ಕಚೇರಿಗೆ ತೆರಳದೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುವುದು. ಜೊತೆಗೆ ಮಾದಕಪದಾರ್ಥಗಳಿಗೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸುವ ನಿಟ್ಟಿನಲ್ಲಿ 24 ತಾಸುಗಳೂ ಚಟುವಟಿಕೆ ನಡೆಸುವ ನಿಯಂತ್ರಣ ಕೊಠಡಿಯನ್ನೂ ಆರಂಭಿಸಲಾಗಿದೆ. ದೂರವಾಣಿ ಸಂಖ್ಯೆ: 04994-256728 ಸಂಪರ್ಕಿಸಬಹುದಾಗಿದೆ.