ಪೆರ್ಲ:ಮಂಜೇಶ್ವರ ಶಾಸಕರಾಗಿದ್ದ ದಿ.ಪಿ.ಬಿ.ಅಬ್ದುಲ್ ರಜಾಕ್ ಸ್ಮರಣಾರ್ಥ ಭಾನುವಾರ ಎಣ್ಮಕಜೆ 'ನಮ್ಮುಡೆ ಲೀಗ್' ವಾಟ್ಸಪ್ಪ್ ಗುಂಪಿನ ಕುಟುಂಬ ಸಂಗಮ ಕಾರ್ಯಕ್ರಮ ನಡೆದಿದ್ದು ಎಣ್ಮಕಜೆ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ ಎ ಅವರನ್ನು ಗೌರವಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಮೂರು ಬಾರಿ ಆಯ್ಕೆಯಾದ ಅವರು ಒಮ್ಮೆ ಪಂಚಾಯಿತಿ ಉಪಾಧ್ಯಕ್ಷೆ, ಹಾಗೂ ಎರಡು ಬಾರಿ ಸ್ಥಾಯೀ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು ಅವರ ಸಾಮಾಜಿಕ ರಂಗದ ಚಟುವಟಿಕೆಗಳನ್ನು ಪರಿಗಣಿಸಿ ಗೌರವಿಸಲಾಯಿತು.