ಮಂಜೇಶ್ವರ: ತೊಟ್ಟೆತ್ತೋಡಿ ಬುಡ್ರಿಯದ ಶ್ರೀ ಮಲರಾಯ ಬಂಟ ದೈವಸ್ಥಾನ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಭರದಿಂದ ಸಾಗುತ್ತಿದ್ದು, ವಿನಂತಿ ಪತ್ರವನ್ನು ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷೆ ಪ್ರೇಮಾ ಕೆ ಭಟ್ ಅಧ್ಯಕ್ಷತೆ ವಹಿಸಿದ್ದು, ಕಾರ್ಯಾಧ್ಯಕ್ಷರಾದ ವಸಂತ ಭಟ್ ತೊಟ್ಟೆತ್ತೋಡಿ, ವಾಮನ ಪೂಜಾರಿ ಕಲ್ಲಗದ್ದೆ ಬುಡ್ರಿಯ, ಗಣಪತಿ ಭಟ್ ಅಮ್ಮೆನಡ್ಕ, ನಾರಾಯಣ ನಾೈಕ್ ನಡುಹಿತ್ಲು ಕುಳೂರು, ದಾಮೋದರ ಸಿ ಅಡ್ಕದಗುರಿ, ತಿಮ್ಮಪ್ಪ ಮೂಲ್ಯ ಬುಡ್ರಿಯ ಉಪಸ್ಥಿತರಿದ್ದರು. ಜೀಣೋದ್ಧಾರ ಸಮಿತಿಯ ಕೋಶಾಧಿಕಾರಿ ಡಾ. ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸದಾಶಿವರಾವ್ ಚಿಗುರುಪಾದೆ ವಂದಿಸಿದರು.