ಅಕ್ರಮ ಭಿತ್ತಿಪತ್ರ ವಿರುದ್ಧ ಕ್ರಮ: ಜಿಲ್ಲಾಧಿಕಾರಿ
0
ಏಪ್ರಿಲ್ 01, 2019
ಕಾಸರಗೋಡು: ಮುದ್ರಕರ ಮತ್ತು ಪ್ರಕಾಶಕರ ಹೆಸರು ಮತ್ತು ಮಾಹಿತಿಗಳನ್ನು, ಪ್ರತಿಗಳ ಸಂಖ್ಯೆ ಪ್ರಕಟಿಸದೇ ಇರುವ ಚುನಾವಣಾ ಸಂಬಂಧಿ ಭಿತ್ತಿಪತ್ರ ಮತ್ತು ತೂಗುಫಲಕಗಳನ್ನು ಅಕ್ರಮವಾಗಿ ಸ್ಥಾಪಿಸುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.
ಮಾದರಿ ನೀತಿಸಂಹಿತೆ ಮತ್ತು ಜನಪ್ರಾತಿನಿಧ್ಯ ಕಾಯಿದೆ ಪ್ರಕಾರ ಈ ಸಂಬಂಧ ಕೇಸು ದಾಖಲಿಸಲಾಗುವುದು ಎಂದವರು ಹೇಳಿದರು. ಇತರ ರಾಜ್ಯಗಳಿಂದ ಅಂಗೀಕಾರವಿಲ್ಲದ ಸಂಸ್ಥೆಗಳಿಂದ ಸೂಕ್ತ ರೀತಿಯಲ್ಲಿ ಮುದ್ರಕರ ಮತ್ತು ಪ್ರಕಾಶಕರ ಹೆಸರ, ಮಾಹಿತಿ ನಮೂದಿಸದೆ ಭಿತ್ತಿಪತ್ರ, ತೂಗುಫಲಕ ಸಿದ್ಧಪಡಿಸಿ ವಿತರಣೆ ನಡೆಸುತ್ತಿರುವುದಾಗಿ ಜಿಲ್ಲೆಯ ಮುದ್ರಣ ಸಂಸ್ಥೆಗಳು ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ.