ಭೂತಾನ್: ಚೀನಾದ ಬೀಜಿಂಗ್ ನಲ್ಲಿ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಎರಡನೇ ಬಿ.ಆರ್.ಐ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಭೂತಾನ್ ಹಿಂದೇಟು ಹಾಕಿದೆ. ಈ ನಿರ್ಧಾರಕ್ಕೆ ಭೂತಾನ್ ಸ್ಪಷ್ಟ ಕಾರಣಗಳನ್ನೇನೂ ನೀಡಿಲ್ಲ. 2017ರಲ್ಲಿ ನಡೆದಿದ್ದ ಮೊದಲೇ ಬಿಆರ್ ಐ ಸಮ್ಮೇಳನದಲ್ಲೂ ಭೂತಾನ್ ಪಾಲ್ಗೊಂಡಿರಲಿಲ್ಲ. ಬಿಆರ್ ಐ ಹೊಸ ಯೋಜನೆ ಆಗಿರುವುದರಿಂದ ಈ ಬಗ್ಗೆ ಪೂರಕ ಮಾಹಿತಿ ನಮ್ಮ ಬಳಿ ಇಲ್ಲ. ಹೀಗಾಗಿ ಬಿಆರ್ ಐ ಸೇರಿಕೊಳ್ಳುವ ಮುನ್ನ ಅದರ ಕುರಿತ ಸಮಗ್ರ ಮಾಹಿತಿ ಕಲೆ ಹಾಕಿ ನಂತರ ಒಂದು ತೀರ್ಮಾನಕ್ಕೆ ಬರಲಾಗುವುದು ಎಂದು ಭೂತಾನ್ ಹೇಳಿತ್ತು.
ಭಾರತ ಈ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ ಮೂರೇ ದಿನಗಳಲ್ಲಿ ಭೂತಾನ್ ತನ್ನ ನಿರ್ಧಾರವನ್ನು ಹೊರ ಹಾಕಿದೆ. ಈ ಮಧ್ಯೆ ದಕ್ಷೀಣ ಏಷ್ಯಾ ರಾಷ್ಟ್ರಗಳಾದ ಬಾಂಗ್ಲಾದೇಶ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ಈ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಪ್ರಕಟಿಸಿವೆ. ಎಲ್ಲರಿಂದಲೂ ಒಪ್ಪಿತವಾದ, ಅಂತರಾಷ್ಟ್ರೀಯ ನಿಯಮಾವಳಿಗಳನ್ನು ಪಾಲಿಸಿದ, ಕಾನೂನು, ಮುಕ್ತತೆ, ಪಾರದರ್ಶಕತೆ, ಸಮಾನತೆಗಳನ್ನೊಳಗೊಂಡ ಬಿಆರ್ ಐ ಯೋಜನೆ ಬಗ್ಗೆ ಭಾರತ ತನ್ನ ನಿಲುವನ್ನು ಹೊರಹಾಕಿತ್ತು. ಅಲ್ಲದೆ ಭೌಗೋಳಿಕ ಸಮಗ್ರತೆ ಹಾಗೂ ಸಾರ್ವಭೌಮತ್ವತೆಯನ್ನೂ ಇದು ಕಾಪಾಡಬೇಕು ಎಂದು ಭಾರತ ಹೇಳಿದೆ.
ಭೂತಾನ್ ನಿರ್ಧಾರ ಹಾಗೂ ಭಾರತದ ನಿಲುವುಗಳಲ್ಲಿ ಕಾಕತಾಳೀಯತೆ ಇರುವುದನ್ನು ನಾವಿಲ್ಲಿ ಕಾಣಬಹುದು. ಹೊಸ ಸರ್ಕಾರವಿದ್ದರೂ ಭೂತಾನ್ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆ ಆಗದಿರುವುದನ್ನು ಇದರಿಂದ ನಾವು ಅರ್ಥಮಾಡಿಕೊಳ್ಳಬಹುದಾಗಿದೆ. ಅಧಿಕಾರವಹಿಸಿಕೊಂಡ ನಂತರ ಭೂತಾನ್ ನ ಪ್ರಧಾನಿ ಡಾ. ಲೋಟೇ ಶೆರಿಂಗ್ ಐದು ವರ್ಷಗಳಿಗೊಮ್ಮೆ ಭೂತಾನ್ ನ ವಿದೇಶಾಂಗ ನೀತಿ ಬದಲಾಗಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಹೀಗಾಗಿ ಆ ದೇಶದ ವಿದೇಶಾಂಗ ನೀತಿಯಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ ಎಂಬುದೂ ಖಾತರಿಯಾದಂತಾಗಿದೆ.
ಭಾರತ ಮತ್ತು ಭೂತಾನ್ ನಡುವೆ 1968ರಲ್ಲಿ ರಾಜತಾಂತ್ರಿಕ ಸಂಬಂಧ ಆರಂಭಗೊಂಡಿತ್ತು. ಇದೊಂದು ಯಶಸ್ವೀ ರಾಜತಾಂತ್ರಿಕ ಸಂಬಂಧ ಎಂಬುದು ಅನೇಕ ವರ್ಷಗಳಿಂದ ಸಾಬೀತಾಗುತ್ತಾ ಬಂದಿದೆ ಕೂಡ. ಪರಸ್ಪರ ನಂಬಿಕೆ ಹಾಗೂ ಅರ್ಥ ಮಾಡಿಕೊಳ್ಳುವಿಕೆಯೇ ಸಂಬಂಧವನ್ನು ಗಟ್ಟಿಗೊಳಿಸುತ್ತಾ ಬಂದಿದೆ.
ಭೂತಾನ್ ಜತೆಗಿನ ವಿಶೇಷ ಸಂಬಂಧದಿಂದಾಗಿಯೇ ಪ್ರಧಾನಿ ಶೆರಿಂಗ್ ಅವರು ಭಾರತಕ್ಕೆ 2018ರ ಡಿಸೆಂಬರ್ ತಿಂಗಳಲ್ಲಿ ಭಾರತಕ್ಕೆ ಮೊದಲ ಭೇಟಿ ನೀಡಿದ್ದರು. ನವದೆಹಲಿಗೆ ಅವರು ವಿಶೇಷ ಆದ್ಯತೆ ನೀಡಿದ್ದಾರೆ.ಭೇಟಿ ಸಂದರ್ಭದಲ್ಲಿ ಎರಡೂ ದೇಶಗಳು ಪ್ರಾದೇಶಿಕ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದವು. ಥಿಂಪುವಿನಲ್ಲಿ ಅಧಿಕಾರ ಬದಲಾದ ಬಳಿಕ ಭಾರತಕ್ಕೆ ಭೇಟಿ ನೀಡಿದ ಮೊದಲ ಉನ್ನತ ಮಟ್ಟದ ನಿಯೋಗ ಇದಾಗಿತ್ತು. ಈ ಭೇಟಿಯನ್ನು ಎರಡೂ ದೇಶಗಳ ಸಂಬಂಧವನ್ನು ಉತ್ತುಂಗಕ್ಕೆ ಕೊಂಡೊಯ್ಯುವ ಅವಕಾಶವನ್ನು ನವದೆಹಲಿ ಚೆನ್ನಾಗಿಯೇ ಬಳಸಿಕೊಂಡಿತು.
ಜೊತೆಗೆ, ಭೂತಾನ್ 12ನೇ ಯೋಜನೆಗೆ ಭಾರತ 45 ಶತಕೋಟಿನೆರವು ನೀಡಲು ಒಪ್ಪಿಕೊಂಡಿತು. ಭಾರತವು ದ್ವಿಪಕ್ಷೀಯ ವ್ಯಾಪಾರಮತ್ತು ಆರ್ಥಿಕ ಸಂಪರ್ಕಗಳನ್ನು ಬಲಪಡಿಸುವ ಸಲುವಾಗಿ ಐದುವರ್ಷಗಳ ವಾಣಿಜ್ಯ ಬೆಂಬಲ, ಸೌಲಭ್ಯವನ್ನು ಒದಗಿಸಲುಒಪ್ಪಿಕೊಂಡಿತು. ಜಲ-ವಿದ್ಯುತ್ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಹಾಗೂ ಭೂತಾನ್ನಲ್ಲಿನ ಯೋಜನೆಗಳನ್ನು ಕೂಡ ಪರಿಶೀಲಿಸಲಾಯಿತು. ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಒಪ್ಪಿಕೊಂಡಿತು. ಭೂತಾನ್ನಲ್ಲಿ 10,000 ಮೆಗಾವ್ಯಾಟ್ಗಳ ಸಾಮಥ್ರ್ಯದ ವಿದ್ಯು???ತ್ಪಾದಿಸುವ ಬಗ್ಗೆ ಜಂಟಿಯಾಗಿ ಎರಡೂ ದೇಶಗಳು ಬದ್ಧತೆಗಳನ್ನುಪುನರುಚ್ಚರಿಸಿದವು.
ಭೂತಾನ್ಗೆ ಚೀನಾ ಜೊತೆ ಯಾವುದೇ ರಾಜತಾಂತ್ರಿಕ ಸಂಬಂಧ ಸಾಧಿಸಿಲ್ಲ. ಥಿಂಪುವಿನ ಯಥಾಸ್ಥಿತಿಯ ವಿದೇಶಿ ನೀತಿ ಮತ್ತು ಆಡಳಿತಸರ್ಕಾರದ ಹೊಸ ಆರ್ಥಿಕ ವೈವಿಧ್ಯೀಕರಣ ಮತ್ತು ಪ್ರವಾಸೋದ್ಯಮನೀತಿಯು ಭಾರತ ಅಭಿವೃದ್ಧಿ ಯೋಜನೆಗಳಿಗೆ ಪರ್ಯಾಯವಾಗಿಬಿಆರ್.ಐ ಸಾಧ್ಯತೆಗಳನ್ನು ಅನ್ವೇಷಿಸಲು ಚೀನಾಕ್ಕೆ ಎಡೆ ಮಾಡಿದೆ. ಈನಿಟ್ಟಿನಲ್ಲಿ, ಹೊಸ ಸರಕಾರವು ಬಿಆರ್ ಐಗೆ ಸೇರುವಂತೆಮನವೊಲಿಸಲು ಚೀನಾ ಎರಡು ಪ್ರಮುಖ ರಾಜತಾಂತ್ರಿಕಕಾರ್ಯಗಳನ್ನು ಥಿಮ್ಪುಗೆ ಕಳುಹಿಸಿದೆ.
2018ರ ಜುಲೈ ತಿಂಗಳಲ್ಲಿ ಚೀನಾದ ವಿದೇಶಾಂಗ ಸಚಿವ ಕೊಂಗ್ ಕ್ಸುವಾನ್ಯೂ ಥಿಂಪುಗೆ ಬೇಟಿ ನೀಡಿದ್ದರು. ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಅವರು ಚರ್ಚೆ ನಡೆಸಿದರು. ಚೀನಾ ಭೂತಾನ್ ಭಾರತ ಟ್ರೈ ಜಂಕ್ಷನ್ ಬಿಕ್ಕಟ್ಟಿನ ಬಗ್ಗೆಯೂ ಅವರು ಚರ್ಚೆ ಮಾಡಿದ್ದರು. ಭೂತಾನ್ ದೇಶದ ಪ್ರತಿನಿಧೀಗಳು ಚೀನಾಕ್ಕೆ ಬೇಟಿ ನೀಡುವಂತೆ ಕೂಡ ಕೇಳಿಕೊಳ್ಳಲಾಯಿತು. ಹಣಕಾಸು ಹಾಗೂ ವಿದ್ಯುತ್ ಯೋಜನೆಗಳ ನೆರವನ್ನು ನೀಡುವುದಾಗಿ ಕೂಡ ಚೀನಾ ಭರವಸೆ ನೀಡಿತ್ತು.
ಚೀನಾದ ಭಾರತದಲ್ಲಿನ ರಾಯಭಾರಿ ಲೂ ಝಾಹೂಯ್ 2019ರ ಫೇಬ್ರವರಿಯಲ್ಲಿ ಭೂತಾನ್ ಗೆ ಭೇಟಿ ನೀಡಿದ್ದರು. ಚೀನಾದ ಸಾಂಸ್ಕೃತಿಕ ನಿಯೋಗವನ್ನು ಅವರು ಕರೆದುಕೊಂಡು ಹೋಗಿದ್ದರು. ಈ ವೇಲೆ ಲೂ ಅವರು ಭೂತಾನ್ ನಾಯಕರೊಂದಿಗೆ ಬಿಆರ್.ಐ ಬಗ್ಗೆ ಕೂಡ ಚರ್ಚಿಸಿದರು. ಚೀನಾದಲ್ಲಿ ವ್ಯಾಪಾರ ಮತ್ತು ಆರ್ಥಿಕ ವ್ಯವಹಾರಗಳ ಕಚೇರಿ ತೆರೆಯುವಂತೆಯೂ ಕೇಳಿಕೊಳ್ಳಲಾಗಿತ್ತು.
ಭೂತಾನ್ ಎಲ್ಲಾ ಒತ್ತಡಗಳನ್ನು ಎದುರಿಸಿದೆ ಮತ್ತು ಎರಡನೇ ಬಿಆಐ ಸಭೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಅದರ ದೀರ್ಘಕಾಲೀನಆಸಕ್ತಿ ಭಾರತದ ವಿದೇಶಿ ಮತ್ತು ಆರ್ಥಿಕ ನೀತಿಗೆ ಆದ್ಯತೆ ನೀಡುವುದಾಗಿದೆ. ಇದು ಭಾರತ-ಭೂತಾನ್ ದ್ವಿಪಕ್ಷೀಯ ಸಂಬಂಧಮತ್ತಷ್ಟು ಬಲಪಡಿಸಿದೆ.
ಲೇಖನ : ಡಾ. ನಿಹಾರ್ ಆರ್. ನಾಯಕ್, ರಿಸರ್ಚ್ ಫೆಲೋ, ಐಡಿಎಸ್ ಎ