ಕಾಸರಗೋಡು: ಜಿಲ್ಲೆಯ ಮಕ್ಕಳಿಗಾಗಿ ಮೂರು ದಿನಗಳ ಚಿತ್ರ ರಚನೆ ಕಾರ್ಯಾಗಾರ ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ನಡೆಯಲಿದೆ.
ರಾಜ್ಯ ಸಂಸ್ಕೃತಿ ಇಲಾಖೆಯ ಸಂಸ್ಥೆ ಕೇರಳ ರಾಜ್ಯ ಬಾಲ ಸಾಹಿತ್ಯ ಇನ್ಸ್ ಸ್ಟಿಟ್ಯೂಟ್ ವತಿಯಿಂದ ಇಂದಿನಿಂದ (ಏ.25ರಿಂದ) 27 ವರೆಗೆ ಚಿತ್ರರಚನೆ ಕಾರ್ಯಾಗಾರ ನಡೆಯಲಿದೆ.
ಈಗಾಗಲೇ ಕಣ್ಣೂರು, ಕೊಲ್ಲಂ, ಇಡುಕ್ಕಿ, ಮಲಪ್ಪುರಂ, ಕೋಟಯಂ, ತಿರುವನಂತಪುರಂ ಜಿಲ್ಲೆಗಳಲ್ಲಿ ನಡೆಸಲಾಗುವ ಚಿತ್ರರಚನೆ, ಕತೆ, ಕವಿತೆ, ಪರಿಸರ, ಚರಿತ್ರೆ, ಗಣಿತ, ವಿಜ್ಞಾನ ವಿಷಯಗಳ ಕಾರ್ಯಾಗಾರ ಅಂಗವಾಗಿ ಇಲ್ಲೂ ಸಮಾರಂಭ ಜರುಗುತ್ತಿದೆ. ಇಂದು (25) ಬೆಳಿಗ್ಗೆ 10.30ಕ್ಕೆ ನಡೆಯುವ ಸಮಾರಂಭದಲ್ಲಿ ಕೃಷಿ ಕಾಲೇಜು ಡೀನ್ ಡಾ.ಪಿ.ಆರ್.ಸುರೇಶ್ ಕಾರ್ಯಾಗಾರ ಉದ್ಘಾಟಿಸುವರು. ಖ್ಯಾತ ಚಿತ್ರಕಾರ ಕಾರಯ್ಮಾ ಮಂಟಪಂ ವಿಜಯಕುಮಾರ್ ಶಿಬಿರದ ನಿರ್ದೇಶಕರಾಗಿರುವರು.