ನಾಳೆಯಿಂದ ತರಬೇತಿ ಆರಂಭ
0
ಏಪ್ರಿಲ್ 01, 2019
ಕಾಸರಗೋಡು: ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯ ಕೇರಳ ರಾಜ್ಯ ಸಿವಿಲ್ ಸರ್ವೀಸ್ ಅಕಾಡೆಮಿಯ ಕಾ?ಂಗಾಡ್ ಕೇಂದ್ರದಲ್ಲಿ ಒಂದು ತಿಂಗಳ ಅವಧಿಯ ರಜಾಕಾಲದ ತರಗತಿಗಳು ನಾಳೆ(ಏ.3) ಆರಂಭಗೊಳ್ಳಲಿವೆ.
ಪ್ರೌಢಶಾಲೆ ವಿದ್ಯಾರ್ಥಿಗಳಿಗಿರುವ ಟಾಲೆಂಟ್ ಡೆವೆಲಪ್ ಮೆಂಟ್ ತರಬೇತಿ ಮತ್ತು ಹೈಯರ್ ಸೆಕೆಂಡರಿ ಶಾಲೆ ವಿದ್ಯಾರ್ಥಿಗಳಿಗೆ ಇರುವ ಸಿವಿಲ್ ಸರ್ವೀಸ್ ಫೌಂಡೇಶನ್ ಕೋರ್ಸ್ ಈ ರೀತಿ ಆರಂಭಗೊಳ್ಳಲಿದೆ. ಬೆಳಗ್ಗೆ 10 ಗಂಟೆಗೆ ಈ ತರಬೇತಿ ಆರಂಭಗೊಳ್ಳುವುದು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಈ ತರಬೇತಿಯ ಉದ್ದೇಶವಾಗಿದೆ. ಒಂದು ಸಾವಿರ ರೂ., ಸರ್ವಿಸ್ ಟಾಕ್ಸ್ ಈ ತರಬೇತಿಯ ಶುಲ್ಕವಾಗಿದೆ. ಹೆಚ್ಚುವರಿ ಮಾಹಿತಿಗೆ ಕಾ?ಂಗಡ್ ಚೆಮ್ಮಟ್ಟುಂವಯಲ್ ಸಯನ್ಸ್ ಆಂಡ್ ಟೆಕ್ನಾಲಜಿ ಪಾರ್ಕ್ ನಲ್ಲಿ ಚಟುವಟಿಕೆ ನಡೆಸುತ್ತಿರುವ ಕೇರಳ ಸ್ಟೇಟ್ ಸಿವಿಲ್ ಸರ್ವೀಸ್ ಅಕಾಡೆಮಿ ಕೇಂದ್ರವನ್ನು (ದೂರವಾಣಿ ಸಂಖ್ಯೆ: 8281098876)ಸಂಪರ್ಕಿಸಬಹುದು.