ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದ ಮತಯಂತ್ರಗಳ ರ್ಯಾಂಡಮೈಸೇಷನ್ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಪ್ರತ್ಯೇಕ ಇ.ವಿ.ಎಂ.ಮೆನೇಜ್‍ಮೆಂಟ್ ಸಾಫ್ಟ್ ವೇರ್ ಬಳಸಿ ರ್ಯಾಂಡಮೈಸೇಷನ್ ನಡೆಸಲಾಗಿದೆ.
ಲೋಕಸಬೆ ಚುನಾವಣೆಯ ಜಿಲ್ಲಾ ನಿರೀಕ್ಷಕ ಎಸ್.ಗಣೇಶ್, ಜಿಲ್ಲೆಯ ಪ್ರಧಾನ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷದಲ್ಲಿ 7 ವಿಧಾನಸಭೆ ಕ್ಷೇತ್ರಗಳಿಗಿರುವ ಮತಯಂತ್ರಗಳ ರ್ಯಾಂಡಮೈಸೇಷನ್ ಪ್ರಕ್ರಿಯೆ ನಡೆದಿದೆ. ರವಿವಾರವೂ ಆಯಾ ವಿಧಾನಸಭೆ ಕ್ಷೇತ್ರಗಳ ಪ್ರತಿ ಮತಗಟ್ಟೆಗಳಿಗಿರುವ ಮತಯಂತ್ರಗಳನ್ನು ಸಿದ್ಧಪಡಿಸಲಾಗುವುದು. ಈ ಸಂಬಂಧ ವಿವಿಪಾಟ್‍ಗಳಿಗೆ ಚಿಹ್ನೆಗಳನ್ನು ಅಪ್‍ಲೋಡ್ ನಡೆಸುವ ಪ್ರಕ್ರಿಯೆಗಳು ನಡೆಯಲಿವೆ. ಕಾಸರಗೋಡು ಸರಕಾರಿ ಕಾಲೇಜು, ಕಾಂಞಂಗಾಡ್ ನೆಹರೂ ಕಾಲೇಜು, ಪಯ್ಯನ್ನೂರು ಎ.ಕೆ.ಜಿ. ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ, ಕಲ್ಯಾಶೇರಿ ಮಾಡಾಯಿ ಸರಕಾರಿ ಹೆಣ್ಣು ಮಕ್ಕಳ ಶಾಲೆಗಳಲ್ಲಿ ರ್ಯಾಂಡಮೈಸೇಷನ್ ನಡೆಯಲಿದೆ. ಎ.16ರಂದು ಬೆಳಗ್ಗೆ 7.30ಕ್ಕೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮಕ್ಷಮದಲ್ಲಿ ಮತಯಂತ್ರಗಳಲ್ಲಿ ಬ್ಯಾಲೆಟ್ ಪೇಪರ್ ಕ್ರಮಗತಗೊಳಿಸಿ, ಮುದ್ರೆ ಹಾಕಲಾಗುವುದು.