HEALTH TIPS

ಇಂದು ಮತದಾರರು ಮತಗಟ್ಟೆಗೆ : ಜಿಲ್ಲೆಯಲ್ಲಿ ಸಕಲ ಸಿದ್ಧತೆ

            ಕಾಸರಗೋಡು: ಲೋಕಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಸಿದ್ಧತೆ ಪೂರ್ಣಗೊಂಡಿದ್ದು, ಇಂದು ಮತದಾನ ನಡೆಯಲಿದೆ. ಕಾಸರಗೋಡು ಲೋಕಸಭೆಯ ಏಳು ವಿಧಾಸಭಾ ಕ್ಷೇತ್ರಗಳಲ್ಲಿ ಒಟ್ಟು  13,63,937 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1317 ಮತಗಟ್ಟೆಗಳಿದ್ದು, ಇದರಲ್ಲಿ 43 ಮತಗಟ್ಟೆಗಳು ಅತೀ ಸೂಕ್ಷ್ಮ ಸಂವೇದಿ ಮತಗಟ್ಟೆಗಳಾಗಿವೆ. 
       ಅಂಗವಿಕಲರಿಗೆ ವೀಲ್‍ಚೇರ್ : ಮತದಾನಕ್ಕೆ ಆಗಮಿಸುವ ಅಂಕವಿಕಲರಿಗೆ ಹಾಗೂ ವಯೋವೃದ್ಧರಿಗೆ ಸೌಕರ್ಯ ಒದಗಿಸುವ ಸಲುವಾಗಿ ಮತಗಟ್ಟೆಗಳಿಗೆ ವೀಲ್ ಚೇರ್‍ಗಳನ್ನು ನೀಡಲಾಗಿದೆ. ಮಾತ್ರವಲ್ಲದೆ ರ್ಯಾಂಪ್ ಸೌಲಭ್ಯವನ್ನು ಏರ್ಪಡಿಸಲಾಗಿದೆ.
       ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರಿರುವ ಕ್ಷೇತ್ರ ಮಂಜೇಶ್ವರ. ಇಲ್ಲಿ ಒಟ್ಟು 212108 ಮತದಾರರಿದ್ದಾರೆ, ಇದೇ ವೇಳೆ ಅತೀ ಕಡಿಮೆ ಮತದಾರರಿರುವ ವಿಧಾನಸಭಾ ಕ್ಷೇತ್ರ ಕಲ್ಯಾಶ್ಶೇರಿ. ಇಲ್ಲಿ ಒಟ್ಟು 175316 ಮತದಾರರಿದ್ದಾರೆ.
       ಪ್ರಿಸೈಡಿಂಗ್ ಆಫೀಸರ್, ಪ್ರಥಮ, ದ್ವಿತೀಯ, ತೃತೀಯ ಪೆÇೀಲಿಂಗ್ ಆಫೀಸರುಗಳು ಸೇರಿದಂತೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 3872 ಮಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
        ಆಹಾರ, ನೀರು : ಚುನಾವಣಾ ಕರ್ತವ್ಯಕ್ಕಿರುವ ಸಿಬ್ಬಂದಿಗಳಿಗೆ ಕುಡಿಯುವ ನೀರು, ಆಹಾರ ವಿತರಣೆ ಇತ್ಯಾದಿಗಳನ್ನು ಕೈಗೊಳ್ಳಲಾಗಿದೆ. ಅದರಂತೆ ಸಾಮಗ್ರಿ ಒದಗಿಸುವ ವೇಳೆ ಅವರಿಗೆ ಸುಮಾರು 20 ಲೀಟರ್‍ನಷ್ಟು ಕುಡಿಯುವ ನೀರಿನ ಬಾಟಲಿಯನ್ನು ವಿತರಿಸಲಾಗಿದೆ. ವೆಬ್‍ಕಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣೆಯ ದಿನದಂದು ಜಿಲ್ಲೆಯಲ್ಲಿ ಮೈಕ್ರೋ ಒಬ್ಸರ್ವರ್‍ಗಳ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ವೀಡಿಯೋ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
    ಇಂದು ಖಾಸಗಿ ವಲಯಕ್ಕೆ ರಜೆ : ಮತದಾನದ ನಿಮಿತ್ತ ಎ.23 ರಂದು ಖಾಸಗಿ ವಲಯದ ಕಾರ್ಮಿಕರಿಗೆ ಮತ ಚಲಾಯಿಸುವ ಸಲುವಾಗಿ ವೇತನ ಸಹಿತ ರಜೆ ಘೋಷಿಸಿ ರಾಜ್ಯ ಲೇಬರ್ ಇಲಾಖೆಯ ಆದೇಶ ಹೊರಡಿಸಿದೆ. 1960 ರ ಕೇರಳ ಶಾಪ್ಸ್ ಆ್ಯಂಡ್ ಎಸ್ಟಾಬ್ಲಿಸ್‍ಮೆಂಟ್ ಆ್ಯಕ್ಟ್‍ನ ವ್ಯಾಪ್ತಿಯಲ್ಲಿರುವ ಸಂಸ್ಥೆಗಳ ಮಾಲಕರು ತಮ್ಮ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಅಂತಹ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ರಾಜ್ಯ ಲೇಬರ್ ಆಫೀಸರ್‍ಗಳಿಗೆ ಇಲಾಖೆಯ ರಾಜ್ಯ ಕಮಿಷನರ್ ಸೂಚಿಸಿದ್ದಾರೆ.
     ಮತದಾನ ಕೇಂದ್ರಗಳಲ್ಲಿ ಮೊಬೈಲ್ ಬಳಕೆ ನಿಷೇಧ : ಪ್ರಿಸೈಡಿಂಗ್ ಆಫೀಸರ್, ಸುರಕ್ಷಾ ಅಧಿಕಾರಿಗಳಿಗೆ ಮಾತ್ರ ಮತದಾನ ಕೇಂದ್ರಗಳಲ್ಲಿ  ಮೊಬೈಲ್ ಫೆÇೀನ್ ಬಳಸಲು ಅನುಮತಿ ಇದೆ. ಇವರನ್ನು ಹೊರತುಪಡಿಸಿ ಬೇರೆ ಯಾರೂ ಮೊಬೈಲ್ ಬಳಸಲು ಅನುಮತಿ ಇಲ್ಲ. ಅಲ್ಲದೆ ಮತದಾನದಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತದಾರರನ್ನು ಮತದಾನ ಕೇಂದ್ರಗಳಿಗೆ ವಾಹನಗಳಲ್ಲಿ ಕರೆತರಲು ಅನುಮತಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ 200 ಮೀಟರ್ ದೂರದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ 100 ಮೀಟರ್ ದೂರದಲ್ಲಿ ಮಾತ್ರ ರಾಜಕೀಯ ಪಕ್ಷಗಳ ತಾತ್ಕಾಲಿಕ ಕೇಂದ್ರ ಸ್ಥಾಪಿಸಬಹುದಾಗಿದೆ. ಇಂತಹ ಕೇಂದ್ರ ಅಥವಾ ಬೂತ್‍ಗಳಲ್ಲಿ ಇಬ್ಬರು ಕುಳಿತುಕೊಳ್ಳಬಹುದು.
    ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 682 ಕೇಂದ್ರಗಳಲ್ಲಾಗಿ 1317 ಮತಗಟ್ಟೆಗಳಿವೆ. ಸೂಕ್ಷ್ಮ ಸಂವೇದಿ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆಯನ್ನು ನಿಗಾಯಿರಿಸಲು ಕಾಸರಗೋಡು ಜಿಲ್ಲಾ„ಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಂ ಸಿದ್ಧಪಡಿಸಲಾಗಿದೆ. ಜಿಲ್ಲಾ„ಕಾರಿ ಡಾ|ಸಜಿತ್ ಬಾಬು ನೇತೃತ್ವದ ತಂಡ ಕಂಟ್ರೋಲ್ ರೂಂನಿಂದ ವೆಬ್‍ಕಾಸ್ಟಿಂಗ್ ಮುಖಾಂತರ ಸೂಕ್ಷ್ಮ ಸಂವೇದಿ ಮತಗಟ್ಟೆಗಳ ಪ್ರಕ್ರಿಯೆಯನ್ನು ನಿರೀಕ್ಷಿಸುವರು.
    ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 212108, ಕಾಸರಗೋಡು -193016, ಉದುಮ-203810, ಕಾಂಞಂಗಾಡ್-209572, ತೃಕ್ಕರಿಪುರ - 194025, ಪಯ್ಯನ್ನೂರು - 176090, ಕಲ್ಯಾಶ್ಶೇರಿ-176090 ಮತದಾರರಿದ್ದಾರೆ. ಈ ಪೈಕಿ 704482 ಮಹಿಳೆ ಮತದಾರರು. ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಸರಗೋಡು ಪೆÇಲೀಸ್ ವರಿಷ್ಠಾ„ಕಾರಿ ಜೇಮ್ಸ್ ಜೋಸೆಫ್ ನೇತೃತ್ವದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. 682 ಮತಗಟ್ಟೆ ಕೇಂದ್ರಗಳಲ್ಲಿ ಪೆÇಲೀಸರನ್ನು ನೇಮಿಸಲಾಗಿದೆ. ಅಲ್ಲದೆ ಬೂತ್‍ಗಳಲ್ಲೂ ಬಿಗು ಪೆÇಲೀಸ್ ವ್ಯವಸ್ಥೆಗೊಳಿಸಲಾಗಿದೆ. ಪೆÇಲೀಸ್ ಪೆಟ್ರೋಲಿಂಗ್ ತಂಡವೂ ಕಾರ್ಯಾಚರಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries