ಕಾಸರಗೋಡು: ಚುನಾವಣೆಯಲ್ಲಿ ಜಯಗಳಿಸಿ ಪಾರ್ಲಿಮೆಂಟ್‍ಗೆ ತಲುಪುವ ಕಾಂಗ್ರೆಸ್ ಸಂಸದರು ಕೇಂದ್ರದಲ್ಲಿ ಅತಂತ್ರ ಸೃಷ್ಟಿಯಾದರೆ ಬಿಜೆಪಿಗೆ ಸೇರರು ಎಂದು ಖಚಿತ ಭರವಸೆ ನೀಡಲು ಎ.ಕೆ.ಆ್ಯಂಟಣಿಗೆ ಸಾಧ್ಯವೇ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಎಂ.ಎ.ಬೇಬಿ ಪ್ರಶ್ನಿಸಿದ್ದಾರೆ.
ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಎಡರಂಗದ ಅಭ್ಯರ್ಥಿ ಕೆ.ಪಿ.ಸತೀಶ್ಚಂದ್ರನ್ ಪರ ಮತ ಯಾಚಿಸಿ ವಿವಿಧೆಡೆಗಳಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಎಡಪಕ್ಷಗಳಿಗೆ ನೀಡುವ ಮತ ನರೇಂದ್ರಮೋದಿಗೆ ನೀಡುವುದಕ್ಕೆ ಸಮಾನ ಎಂದು ಹೇಳುವ ಆ್ಯಂಟಣಿಯಿಂದ ಪಕ್ಷದ ಸಂಸದರನ್ನು ಅಮಿತ್ ಷಾ, ಮೋದಿಯವರಿಗೆ ಖರೀದಿಸಲು ಸಾಧ್ಯವಿದೆ. ಆದರೆ ಎಡಪಕ್ಷದವರನ್ನು ಖರೀದಿಸಲು ಸಾಧ್ಯವಿಲ್ಲ. ಐದು ವರ್ಷದ ಹಿಂದೆ ಕಾಂಗ್ರೆಸ್ ಸಂಸದರಾಗಿದ್ದ ನೂರಕ್ಕಿಂತ ಅ„ಕ ನೇತಾರರು ಇಂದು ಮೋದಿ ಭಕ್ತರಾಗಿ ಬಿಜೆಪಿಯಲ್ಲಿದ್ದಾರೆ. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಬೇಬಿ ಆರೋಪಿಸಿದರು. ಭಾರತದ ಭವಿಷ್ಯ ಭದ್ರವಾಗಬೇಕಿದ್ದರೆ ಎಡರಂಗ ಬಲಪಡಿಸಬೇಕೆಂದು ಅವರು ಅಭಿಪ್ರಾಯಪಟ್ಟರು.