ಭಾಜಪ ಚುನಾವಣಾ ಕಚೇರಿ ಉದ್ಘಾಟನೆ
0
ಏಪ್ರಿಲ್ 04, 2019
ಮಂಜೇಶ್ವರ: ಭಾರತೀಯ ಜನತಾ ಪಕ್ಷ ಮೀಂಜ ಪಂಚಾಯತಿ ಸಮಿತಿಯ ಚುನಾವಣಾ ಕಛೇರಿಯು ಮೀಯಪದವಿನಲ್ಲಿ ಬುಧವಾರ ಉದ್ಘಾಟಿಸಲ್ಪಟ್ಟಿತು. ತೊಟ್ಟೆತ್ತೋಡಿ ವಸಂತ ಭಟ್‍ರವರ ಪ್ರಾರ್ಥನೆಯೊಂದಿಗೆ ಉಮೇದ್ವಾರ ರವೀಶ್ ತಂತ್ರಿಯವರು ಉದ್ಘಾಟಿಸಿ ಕಾರ್ಯಕರ್ತರಿಗೆ ಅಭಿನಂದನೆಯನ್ನು ಸಲ್ಲಿಸಿದರು. 2019ರ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತವೆಂದ ತಂತ್ರಿಗಳು ಭಾರತದಲ್ಲಿ ಜನರು ಅಭಿವೃದ್ಧಿ ಮತ್ತು ಶಾಂತಿ ನೆಮ್ಮದಿಯನ್ನು ಬಯಸುತ್ತಾರೆ. ಮೋದಿಯವರು ಭಾರತದ ಹಾಗೂ ವಿಶ್ವದ ಕಣ್ಮಣಿಯಾಗಿದ್ದಾರೆ. ಮತ್ತೊಮ್ಮೆ ಕೇಂದ್ರದಲ್ಲಿ ಮೋದಿಯವರನ್ನೇ ಆರಿಸುವಂತೆ ವಿನಂತಿಸಿದರು.
ಚಂದ್ರಶೇಖರ ಕೋಡಿ ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ಪದ್ಮನಾಭ ರೈ ಉಂಬಲ್ತೋಡಿ, ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ದಿನಕರ ಭಟ್, ನಾರಾಯಣ ನಾಯ್ಕ್, ದಾಮೋದರ, ರಾಜೇಶ್ ಕೋಡಿ, ದಿನಕರ ಶೆಟ್ಟಿ, ಗ್ರಾಮ ಪಂಚಾಯತಿ ಸದಸ್ಯೆಯರಾದ ಶಾಲಿನಿ, ಕುಸುಮ, ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಬಿ.ಜೆ.ಪಿ ಪಂಚಾಯತು ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಬೆಜ್ಜ ಸ್ವಾಗತಿಸಿ ವಂದಿಸಿದರು.