ಪಚ್ಲಂಪಾರೆ ಉಮಾ ಭಗವತೀ ಭಜನಾ ಮಂದಿರಕ್ಕೆ ಧರ್ಮಸ್ಥಳದಿಂದ ಸಹಾಯಧನ ಹಸ್ತಾಂತರ
0
ಏಪ್ರಿಲ್ 05, 2019
ಉಪ್ಪಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾಸರಗೋಡು ಇದರ ವತಿಯಿಂದ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿದ 1ಲಕ್ಷ ರೂ ಸಹಾಯಧನದ ಡಿ.ಡಿಯನ್ನು ಪಚ್ಲಂಪಾರೆ ಶ್ರೀ ಉಮಾಭಗವತೀ ಭಜನಾ ಮಂದಿರದ ಪದಾಧಿಕಾರಿಗಳಿಗೆ ಬುಧವಾರ ಮೇಲ್ವಿಚಾರಕರಾದ ಅರುಣ್ ಕುಮಾರ್ ಹಾಗೂ ತಲಪಾಡಿ ವಲಯದ ಮೇಲ್ವಿಚಾರಕ ಮೋಹನ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಜನಾ ಮಂದಿರದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬಾಬು.ಯು, ಪ್ರಧಾನ ಕಾರ್ಯದರ್ಶಿ ಮುರುಗೇಶ್, ಜೊತೆ ಕಾರ್ಯದರ್ಶಿ ವಿಜಯ ಕುಮಾರ್.ಬಿ, ಉಮಾ ಭಗವತೀ ಮಹಿಳಾ ಸಂಘದ ಅಧ್ಯಕ್ಷೆ ಭಾರತಿ, ಕಾರ್ಯದರ್ಶಿ ಜಯಂತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.