ಮಂಜೇಶ್ವರ: ಪಾವೂರು ಕೊಪ್ಪಳ ಶಿವಪುರ ಶ್ರೀ ಮಹಾಮ್ರತ್ಯುಂಜಯೇಶ್ವರ ದೇವಸ್ಥಾನದ ಶ್ರೇಯೋಬಿವೃದ್ಧಿಗಾಗಿ ನಡೆದ 48 ದಿನಗಳ ಶಿವನಾಮ ಜಪ ಭಜನಾ ಸತ್ಸಂಗ ಸಮಾರೋಪ ಸಮಾರಂಭ ಅರಿಬೈಲು ಗೋಪಾಲ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಡಾ.ಶ್ರೀಧರ ಭಟ್ ಉಪ್ಪಳ, ಶ್ರೀಧರ ಶೆಟ್ಟಿ, ಸುಬ್ಬು ಗುರುಸ್ವಾಮಿ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮಂಗಳೂರು ಜಿಲ್ಲಾ ಸಮಿತಿಯ ನಾರಾಯಣ ಕುಂಪಲ ಉಪಸ್ಥಿತರಿದ್ದರು.
ಬೆಳಿಗ್ಗೆ ಸೂರ್ಯೋದಯ ಕಾಲದಲ್ಲಿ ಗಣಯಾಗ ನಡೆದ ಬಳಿಕ ಕನ್ನಿಕಾ ಪೂಜೆಯನ್ನು ನೆರವೇರಿಸಿ ಸಭಾಕಾರ್ಯಕ್ರಮದ ಬಳಿಕ ಹರಿಕಥಾ ಸತ್ಸಂಗವನ್ನು ಯೋಗಾಚಾರ್ಯ ಪುಂಡರಿಕಾಕ್ಷ ಬೆಳ್ಳೊರು ನಡೆಸಿಕೊಟ್ಟರು. ಪದ್ಮನಾಭ ವಂದಿಸಿದರು.