ಮೂವರು ಅಭ್ಯರ್ಥಿಗಳ ನಾಮಪತ್ರಿಕೆ ಸಲ್ಲಿಕೆ
0
ಏಪ್ರಿಲ್ 01, 2019
ಕಾಸರಗೋಡು: ಕಾಸರಗೋಡು ಲೋಕಸಭೆ ಕ್ಷೇತ್ರದಲ್ಲಿ ಸೋಮವಾರ ಮೂವರು ಅಭ್ಯರ್ಥಿಗಳು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ತಮ್ಮ ನಾಮಪತ್ರಿಕೆ ಸಲ್ಲಿಸಿದರು. ಕುಂಟಾರು ರವೀಶ ತಂತ್ರಿ (ಬಿ.ಜೆ.ಪಿ.), ಸಂಜೀವ ಶೆಟ್ಟಿ(ಬಿ.ಜೆ.ಪಿ.)ಬಶೀರ್ ಟಿ.ಕೆ.(ಬಹುಜನ್ ಸಮಾಜ್ ಪಾರ್ಟಿ) ಎಂಬವರು ನಾಮಪತ್ರಿಕೆ ಸಲ್ಲಿಸಿದವರು. ಹಸುರು ಸಂಹಿತೆ ಪಾಲಿಸಿ, ಶಾಂತಿಪೂರ್ವಕ ಚುನಾವಣೆಗೆ ಅಭ್ಯರ್ಥಿಗಳು ಸಹಕರಿಸುವಮತೆ ಜಿಲ್ಲಾಧಿಕಾರಿ ವಿನಂತಿಸಿದರು.