HEALTH TIPS

ಸೌಹಾರ್ಧದ ನೆಲೆವೀಡು ಗಡಿನಾಡಿಗೂ ಕಾಲಿರಿಸಿದ ಐಸಿಸ್- ಓರ್ವನ ಬಂಧನ

       ಕಾಸರಗೊಡು: ಶ್ರೀಲಂಕಾದಲ್ಲಿನ ಈಸ್ಟರ್ ಸಂಡೇ ಬಾಂಬ್ ದಾಳಿಗೆ ಸಂಬಂಧಿಸಿ ರಾಷ್ಟ್ರೀಯ ಭದ್ರಾತಾ ದಳ (ಎನ್ ಐಎ) ಕೇರಳದ ಕಾಸರಗೋಡು ಸೇರಿ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು ಓರ್ವ ಯುವಕನನ್ನು ವಶಕ್ಕೆ ಪಡೆದಿದೆ.
     ಪಾಲಕ್ಕಾಡ್ ಜಿಲ್ಲೆ  ಕೈಲಂಗಾಡ್ ನ ನಿವಾಸಿ ರಿಯಾಜ್ ಅಬೂಬಕರ್ (28) ನನ್ನು ಎನ್ ಐಎ ವಶಕ್ಕೆ ಪಡೆದಿದೆ.ಹೆಚ್ಚಿನ ವಿಚಾರಣೆಗಾಗಿ ಆತನನ್ನು ಎರ್ನಾಕುಳಂ ಗೆ ಕರೆದೊಯ್ಯಲಾಗಿದೆ.
    ಎನ್ ಐಎ ಸಿಬ್ಬಂದಿ ಮೂರು ಗಂಟೆಗಳ ಕಾಲ ರಿಯಾಜ್ ಮನೆಯಲ್ಲಿ ಹುಡುಕಾಟ ನಡೆಸಿ, ಆತ ಓದುವ ಪುಸ್ತಕಗಳು,  ಮತ್ತು ಅಂತರ್ಜಾಲದಲ್ಲಿ ಭೇಟಿ ನೀಡಿದ  ಸೈಟುಗಳ ಬಗೆಗೆ ಮಾಹಿತಿ ಕಲೆಹಾಕಿದ ತರುವಾಯ ಅವನನ್ನು ವಶಕ್ಕೆ ಪಡೆಯಲಾಗಿದೆ.ತಾವು ರಿಯಾಜ್ ನನ್ನು ವಶಕ್ಕೆ ಪಡೆದಿರುವ ಬಗೆಗೆ ಕೈಲಂಗಾಡ್ ಪೋಲೀಸರಿಗೆ ಎನ್ ಐಎ ಮಾಹಿತಿ ನೀಡಿದೆ.
   ಇದಕ್ಕೂ ಮೊದಲು ವಿದ್ಯಾನಗರ ನಾಯಮ್ಮಾರ್‍ಮೂಲೆ ಹಾಗೂ ಬಂದಡ್ಕದಲ್ಲಿ ಇಬ್ಬರು ಶಂಕಿತರ ಮನೆ ಮೇಲೆ ಎನ್ ಐಎ ಕೊಚ್ಚಿ ತಂಡ ದಾಳಿ ನಡೆಸಿ ಶಂಕಿತ ದಾಖಲೆಗಳನ್ನು ವಶಕ್ಕೆ ಪಡೆದಿತ್ತು..
    ಬಂಧಿತ ರಿಯಾಜ್ ಮುಸ್ಲಿಮರು ಧರಿಸುವ ಟೋಪಿಯ ವ್ಯಾಪಾರಿಯಾಗಿದ್ದನೆನ್ನಲಾಗಿದೆ. ಸುಗಂಧ ದ್ರವ್ಯಗಳು ಮತ್ತು ಇತರ ವಿದೇಶಿ ಸಾಮಗ್ರಿಗಳನ್ನು  ಬಳಸುತ್ತಿದ್ದ ಈತ ಸಾಮಾಜಿಕ ಮಾದ್ಯಮದಲ್ಲಿ ಸಹ ಸಕ್ರಿಯನಾಗಿದ್ದನು.
    ಇದಲ್ಲದೆ ಕೈಲಂಗಾಡ್ ನ ಅಹಮದ್ ಅರಾಫತ್ ಹಾಗೂ ನೈನರ್ಮೂಲ ದ ಅಬೂಬಕರ್ ಸಿದ್ದಕಿ ಅವರುಗಳ ಮನೆ ಮೇಲೆ ಕೊಚ್ಚಿನ್ ಎನ್ ಐಎ ತಂಡದಿಂದ ದಾಳಿ ನಡೆದಿದೆ. ಇಬ್ಬರು ವ್ಯಕ್ತಿಗಳೂ 30 ವರ್ಷದ ಆಸುಪಾಸಿನವರಾಗಿದ್ದು ಮಾಜಿಕ ಮಾಧ್ಯಮದಲ್ಲಿ ಶ್ರೀಲಂಕಾದ ಸ್ಫೋಟ ಪ್ರಕರಣಗಳ ಕಾರಣಕರ್ತರಾಗಿದ್ದ ಉಗ್ರ ಸಂಘಟನೆ ನಾಯಕ ಜಹರನ್ ಹಶೀಮ್ ಹಾಗೂ ಐಎಸ್ ನ ಹಿಂಬಾಲಕರಾಗಿದ್ದಾರೆ.
    ಅಧಿಕಾರಿಯೊಬ್ಬರು ತಿಳಿಸಿದಂತೆ ಮುಂಜಾನೆ 6ಗಂಟೆಗೆ ದಾಳಿ ಪ್ರಾರಂಬವಾಗಿದ್ದು ಮಧ್ಯಾಹ್ನದ ವರೆಗೆ ಮುಂದುವರಿದಿದೆ. ದಾಳಿಯ ವೇಳೆ ನಾನಾ ಬಗೆಯ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ, ಕೊಲಂಬೊದಲ್ಲಿನ ಸರಣಿ ಬಾಂಬ್ ಸ್ಫೋಟ ಹಾಗೂ ಇದೀಗ ಶ್ರೀಲಂಕಾದಿಂದ ನಿಷೇಧಿಸಲ್ಪಟ್ಟಿರುವ ತಮಿಳುನಾಡಿನ ತೌಹೀತ್ಫನ್ ಜಮಾಥ್ ಗೆ ಸಂಬಂಧಿಸಿದ ದಾಖಲೆಗಳು ಇದಾಗಿರುವ ಸಾಧ್ಯತೆ ಇದೆ.
    ಎರಡೂ ಮನೆಗಳಲ್ಲಿನ ಸದಸ್ಯರು ಫೇಸ್ ಬುಕ್ ನಂತಹಾ  ಸಾಮಾಜಿಕ ಮಾಧ್ಯಮದ ಮೂಲಕ ಉಗ್ರ ಸಂಘಟನೆಗಳೊಡನೆ ಸಂಪರ್ಕ ಹೊಂದಿದ್ದಾರೆಂದು ಶಂಕಿಸಲಾಗಿದೆ.
ಈ ಹಿಂದೆ ಪತ್ರಿಕೆಯೊಂದು ವರದಿ ಮಾಡಿದ್ದಂತೆ ಶ್ರೀಲಂಕಾ ಉಗ್ರ ದಾಳಿಗೆ ಸಂಬಂಧಿಸಿ ಭಯೋತ್ಪಾದಕ ಸಂಘಟನೆಯೊಂದು ಮಲಯಾಳಂ ಹಾಗೂ ತಮಿಳಿನಲ್ಲಿ ವೀಡಿಯೋ ಬಿಡುಗಡೆ ಂಆಡಿದ ನಂತರ ಸುಮಾರು  60 ಮಲಯಾಳಿ ಕುಟುಂಬಗಳು ತೀವ್ರ ಶೋಧನೆ, ತಪಾಸಣೆಯ ಪರಿಧಿಯೊಳಗಿದ್ದಾರೆ.
    ಕಳೆದ ಭಾನುವಾರ ಶ್ರೀಲಂಕಾದಲ್ಲಿ ನಡೆದಿದ್ದ ಎಂಟು ಬಾಂಬ್ ಸ್ಪೋಟದಲ್ಲಿ  250 ಕ್ಕೂ ಅಧಿಕ ಮಂದಿ ಸತ್ತು ಐನೂರು ಜನರು ಗಾಯಗೊಂಡಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries