ಕುಂಬಳೆ: ಮಕ್ಕಳ ಮನಸ್ಸು ಒದ್ದೆ ಮಣ್ಣಿನಂತೆ ಏನನ್ನು ನೀಡಿದರೂ ಅದು ಸ್ವೀಕರಿಸುತ್ತದೆ ಎನ್ನುವ ಮಾತಿದೆ. ಆದರೆ ಮಕ್ಕಳ ಮನಸ್ಸು ಬಂಡೆ ಕಲ್ಲಿನಂತೆ. ನಾವು ಆ ಕಲ್ಲಿನಲ್ಲಿ ಯಾವ ರೂಪವನ್ನು ಬೇಕಾದರೂ ಕೆತ್ತಬಹುದು ಎಂದು ಖ್ಯಾತ ರಂಗ ನಿರ್ದೇಶಕ, ಚಿತ್ರಕಲಾವಿದ ಶಿವಗಿರಿ ಕಲ್ಲಡ್ಕ ಅಭಿಪ್ರಾಯಪಟ್ಟರು.
ಅವರು ರಂಗಚೇತನ ಕಾಸರಗೋಡು ನೇತೃತ್ವದಲ್ಲಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘ ಮತ್ತು ಬಿ.ಪಿ.ಪಿ.ಎ.ಎಲ್.ಪಿ ಶಾಲೆ ಪೆರ್ಮುದೆ ಇದರ ಸಹಭಾಗಿತ್ವದೊಂದಿಗೆ ಪೆರ್ಮುದೆಯಲ್ಲಿ ಆಯೋಜಿಸಲಾದ ತ್ರಿದಿನ ರಂಗ ತರಬೇತಿ ಶಿಬಿರ ರಂಗೋಲಿ-2019 ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಬೇಸಗೆ ರಜೆ ಹೊಸತನ್ನು ಕಲಿಯಲು ಇರುವಂಥ ಸುವರ್ಣಾವಕಾಶ. ಪಠ್ಯೇತರ ಚಟುವಟಿಕೆಗಳಿಗೆ ಈ ಸಮಯದಲ್ಲಿ ಹೆಚ್ಚು ಒತ್ತು ನೀಡಬೇಕು. ಮಕ್ಕಳು ದೇವರಂತೆ. ಆದರೆ ಅವರೊಳಗಿನ ದೈವಿಕತೆಯನನು ಉಳಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದವರು ಅಭಿಪ್ರಾಯಪಟ್ಟರು. ಬದುಕೆಂಬ ನಾಟಕ ರಂಗದಲ್ಲಿ ಕತೆ ಮರುಸೃಷ್ಟಿ ಪಡೆಯುತ್ತದೆ.ಅಂತಹ ಕಥೆಗಳನ್ನು ಗುರುತಿಸುವ-ಹೆಕ್ಕುವ ಪ್ರಯತ್ನಗಳಾಗಬೇಕು ಎಂದವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಚೇತನದ ಅಧ್ಯಕ್ಷ ಬಾಲಕೃಷ್ಣ ಮಾಸ್ತರ್ ಅವರು ಮಕ್ಕಳು ಅತಿಯಾದ ಮೊಬೈಲ್ ಗೀಳಿಗೆ ಒಳಗಾಗುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ವಿವರಿಸಿ, ಸೃಜನಶೀಲತೆಗೆ ಬೆಂಬಲ ನೀಡಬೇಕು ಎಂದು ತಿಳಿಸಿದರು. ಶಿಕ್ಷಕರು ಹಾಗೂ ಹೆತ್ತವರು ಈ ನಿಟ್ಟಿನಲ್ಲಿ ಮುಂದೆಬರಬೇಕು ಎಂದು ಅವರು ಕರೆನೀಡಿದರು.
ಹಲವಾರು ವಿಶೇಷತೆಗಳೊಂದಿಗೆ ಸಂಪನ್ನಗೊಂಡ ಶಿಬಿರದಲ್ಲಿ 60 ಶಿಬಿರಾರ್ಥಿಗಳು ಮೂರು ದಿನಗಳ ಕಾಲ ರಂಗಾಟ, ರಂಗಗೀತೆಗಳ ಗಾಯನ, ರಂಗ ಸಂಗೀತ, ಮೈಮ್ ಶೋ, ಪ್ರಕೃತಿ ವೀಕ್ಷಣೆ, ಗಾಳಿಪಟ ಉತ್ಸವ, ಕ್ಯಾಂಪ್ ಫೆಯರ್, ಮುಂತಾದ ಹತ್ತಾರು ಚಟುವಟಿಕೆಗಳ ಮೂಲಕ ಅನುಭವದ ಬುತ್ತಿಯನ್ನು ತುಂಬಿಕೊಂಡರು. ಮಾಹಿತಿ ಪೂರ್ಣವಾದ ಶಿಬಿರದಲ್ಲಿ ಮನೋರಂಜನೆಯ ಕಾರ್ಯಕ್ರಮಗಳನ್ನು ಮನದಣಿಯೆ ಆಸ್ವಾದಿಸಿ ಸಂಭ್ರಮಿಸಿದರು. ಅನುಭವೀ ಕಲಾವಿದರ, ರಂಗಕರ್ಮಿಗಳ ಮಾರ್ಗದರ್ಶನ, ಅನುಭವದ ಮಾತುಗಳು ಶಿಬಿರಾರ್ಥಿಗಳಿಗೆ ಹೊಸ ವಿಷಯಗಳನ್ನು ಸರಳವಾಗಿ ಮನದಟ್ಟಾಗುವಂತೆ ಮಾಡಿತು.
ಶಿಬಿರದ ಸಮಾರೋಪದ ದಿನ ಪ್ರದರ್ಶಿಸಲಾದ ಮೂರು ಮಕ್ಕಳ ನಾಟಕಗಳು ಪ್ರೇಕ್ಷಕರ ಗಮನ ಸೆಳೆದವು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ನೀತಿಯುಕ್ತವಾದ ನಾಟಕಗಳು ರಂಗಪರಿಕರ, ಭಾವಾಭಿವ್ಯಕ್ತಿಗಳಿಂದ ವಿಭಿನ್ನವಾಗಿ ಮೂಡಿಬಂತು. ಶಿಬಿರಾರ್ಥಿಗಳು ನುರಿತ ರಂಗಕರ್ಮಿಗಳಾದ ಉದಯ ಸಾರಂಗ್ ನಿರ್ದೇಶನದಲ್ಲಿ ದೇವರು, ವಸಂತ ಮಾಸ್ತರ್ ಅವರ ಜೀವಜಲ ಹಾಗೂ ಸದಾಶಿವ ಮಾಸ್ತರ್ ನಿರ್ದೇಶನದ ಎಲ್ಲೂ ಹಾರದ ಪಕ್ಷಿಗಳು ನಾಟಕಗಳನ್ನು ಪ್ರದರ್ಶಿಸಿದರು. ಕೆಲವೇ ಗಂಟೆಗಳನ್ನು ನಾಟಕಕ್ಕಾಗಿ ಉಪಯೋಗಿಸಿದ್ದರೂ ನಾಟ ಕಗಳ ಅತ್ಯುತ್ತಮ ಪ್ರದರ್ಶನ ಈ ಶಿಬಿರದ ಯಶಸ್ಸಿಗೆ ಕೈಗನ್ನಡಿಯಾಯಿತು.
ಉತೃಷ್ಟವಾದ ಕಥಾ ವಸ್ತುಗಳನ್ನು ಆಯ್ದುಕೊಂಡ ಮಕ್ಕಳ ಕಲಾಸಕ್ತಿ, ಅಭಿನಯ ಚತುರತೆ, ಹಾಗೂ ನಾಟಕಗಳ ಬಗೆಗಿನ ಪುಟ್ಟ ಮನಸುಗಳ ದೊಡ್ಡ ಕಲ್ಪನೆಗಳನ್ನು ತೆರೆದಿಡುವಲ್ಲಿ ಈ ಶಿಬಿರವು ಸಾರ್ಥಕವೆನಿಸಿತು.
ಶಿಬಿರಕ್ಕೆ ಪತ್ಯಕ್ಷ ಹಾಗೂ ಪರೋಕ್ಷ ಸಹಕಾರ ನೀಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ಗೌರವಿಸಲಾಯಿತು. ಸದಾಶಿವ ಮಾಸ್ತರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು.