ಬದಿಯಡ್ಕ: ಎಡನೀರಿನ ಸ್ವಾಮೀಜೀಸ್ ಶಾಲಾ ವಠಾರದಲ್ಲಿ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಸಂಸ್ಥೆಯ ವಾರ್ಷಿಕೋತ್ಸವವು ಸಂಪನ್ನಗೊಂಡಿತು. ಅನಘಾ ಭಟ್ ಸುಳ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
ಸಂಸ್ಥೆಯ ಸ್ಥಾಪಕಾಧ್ಯಕ್ಷೆ ವಿದುಷಿ ಅನುಪಮಾ ರಾಘವೇಂದ್ರ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕುಂಬಳೆ ಉಪಜಿಲ್ಲಾ ನಿವೃತ್ತ ಉಪಶಿಕ್ಷಣಾಧಿಕಾರಿಗಳಾಗಿದ್ದ ಕೈಲಾಸಮೂರ್ತಿ ಕೆ. ಅವರು ಎಡನೀರು ಒಂದು ಸಾಂಸ್ಕøತಿಕ ಕೇಂದ್ರ. ಇದನ್ನೇ ಕೇಂದ್ರವಾಗಿರಿಸಿ ಕೊಂಡಿರುವ ಭೂಮಿಕಾ ಪ್ರತಿಷ್ಠಾನ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಉನ್ನತ ಧ್ಯೇಯೋದ್ದೇಶಗಳನ್ನು ಹೊಂದಿರುವ ಈ ಸಂಸ್ಥೆಯ ಎಲ್ಲಾ ಯೋಜನೆಗಳು ಈಡೇರಲಿ. ಇನ್ನೂ ಇಂತಹ ಸಮಾಜಮುಖೀ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾಗಿ ವಿದ್ವಾನ್ ನಟರಾಜ ಶರ್ಮಾ ಬಿ. ಹಾಗೂ ವಿದುಷಿ ಉಷಾ ಈಶ್ವರ ಭಟ್ ಸಂಗೀತ ಹಾಗೂ ನೃತ್ಯದ ಅವಿನಾಭಾವ ಸಂಬಂಧದ ಬಗ್ಗೆ ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಡಾ.ವೆಂಕಟೇಶ್ ಸುಳ್ಯ ವಂದಿಸಿದರು. ಸಂಸ್ಥೆಯ ಕೋಶಾ„ಕಾರಿ ರಾಘವೇಂದ್ರ ಭಟ್ ಉಡುಪುಮೂಲೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಪ್ರತಿಷ್ಠಾನದ ಶಿಷ್ಯ ವೃಂದದವರಿಂದ ನಡೆದ ನೃತ್ಯ ಸಿಂಚನ ಜನಮೆಚ್ಚುಗೆ ಗಳಿಸಿತು. ನಟುವಾಂಗ ಹಾಗೂ ನೃತ್ಯ ನಿರ್ದೇಶನ ವಿದುಷಿ ಅನುಪಮಾ ರಾಘವೇಂದ್ರ, ಹಾಡುಗಾರಿಕೆಯಲ್ಲಿ ವಸಂತ ಕುಮಾರ ಗೋಸಾಡ ಹಾಗೂ ಶಿಲ್ಪಾ ಚೈತನ್ಯ ವಾಶೆಮನೆ ಸಹಕರಿಸಿದರು. ಮೃದಂಗದಲ್ಲಿ ರಾಜೀವ ಗೋಪಾಲ್ ವೆಳ್ಳಿಕ್ಕೋತ್ ಹಾಗೂ ವಯೋಲಿನ್‍ನಲ್ಲಿ ವಿದ್ವಾನ್ ಬಾಲರಾಜ್ ಮುಳ್ಳೇರಿಯ ಸಹಕರಿಸಿದರು.