HEALTH TIPS

ಆತ್ಮಜ್ಯೋತಿ ಬೆಳಗುವ ಧರ್ಮಮಾರ್ಗದ ಹಾದಿ ತುಳಿಯಬೇಕು-ಒಡಿಯೂರು ಶ್ರೀ

     ಕುಂಬಳೆ: ಭಾಷೆ ಪರಸ್ಪರ ಸಂಪರ್ಕವನ್ನು ಬಲಗೊಳಿಸುವ ಮಾಧ್ಯಮವಾಗಿದೆ. ಭಗವಂತನ ಅನುಸಂಧಾನಕ್ಕೆ ಹೃದಯದ ಭಾಷೆ ಅಗತ್ಯವಿದೆ. ಇಹ-ಪರದ ಸಾಧನೆಗೆ ಧರ್ಮ ಮಾರ್ಗದ ಮೂಲಕ ಕ್ರಮಿಸುವ ಮೂಲಕ ಆಂತರ್ಯದ ಬೆಳಕಾದ ಆತ್ಮಜ್ಯೋತಿಯನ್ನು ಬೆಳೆಗಿಸುವ ಧರ್ಮಮಾರ್ಗದ ಬದುಕನ್ನು ರೂಢಿಸಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರು ದೇವಾನಂದ ಸ್ವಾಮೀಜಿ ಅವರು ತಿಳಿಸಿದರು.
   ಕುಂಬಳೆ ಸಮೀಪದ ಆರಿಕ್ಕಾಡಿಯ ಶ್ರೀಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀವೀರಾಂಜನೇಯ ದೇವಾಲಯದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮಂಗಳವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಪಸ್ಥಿತರಿದ್ದು ಆಶೀರ್ವಚನಗೈದು ಅವರು ಮಾತನಾಡಿದರು.
   ಜೀವಾತ್ಮ ಮತ್ತು ಪರಮಾತ್ಮನ ಅಚೇತನವಾದ ಬಂಧಕ್ಕೆ ಪ್ರೀತಿಯ ಭಾವ ಬಂಧದ ಮೂಲಕ ಬ್ರಹ್ಮಕಲಶ ಮಾಡಿದಾಗ ಜೀವ-ಭಾವ ಸಾಫಲ್ಯಗೊಳ್ಳುತ್ತದೆ ಎಂದು ಅವರು ತಿಳಿಸಿದರು. ಆಧ್ಯಾತ್ಮದ ಮೂಲಕ ಬದುಕು ಬಂಗಾರವಾಗುತ್ತದೆ. ಜೀವನು ದೇವನಾಗಲು ಭಾವನಾತ್ಮಕ ಸಂಬಂಧ ಅಗತ್ಯವಿದ್ದು ಅದು ಅಷ್ಟಬಂಧದ ಮೂಲಕ ನೆರವೇರುತ್ತದೆ ಎಂದು ಶ್ರೀಗಳು ತಿಳಿಸಿದರು.
   ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅವರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಸಾಪ ಮಾಜಿ ಕೇಂದ್ರಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾತನಾಡಿ, ಯುವ ಮನಸ್ಸುಗಳಿಗೆ ಧಾರ್ಮಿಕ ಭಾವನೆಗಳನ್ನು ಕಲಿಸುವ ಯತ್ನಗಳಾಗಬೇಕು. ಗುರು ಪರಂಪರೆಯ ಮೂಲಕ ಬೆಳೆದ ಭಾರತೀಯತೆಯ ಜೀವದರ್ಶನ ಹೊಸ ಹೊಳಹುಗಳೊಂದಿಗೆ ಬೆಳೆಯಬೇಕು ಎಂದು ತಿಳಿಸಿದರು. ನಮ್ಮ ಆಚರಣೆ-ನಂಬಿಕೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳಾಗಬೇಕು ಎಂದ ಅವರು ಯತಿವರ್ಯರು ಆಶೀರ್ವಾದ ಪೂರ್ವಕ ನೀಡುವ ಮಂತ್ರಾಕ್ಷತೆ ಬಳಕೆಯ ಸಹಿತ ಸಮಗ್ರ ಆಚರಣೆಗಳ ಮೂಲಾರ್ಥದ ಸ್ಪಷ್ಟತೆ ಹೊಸ ತಲೆಮಾರಿಗೆ ದಾಟಿಸುವ ಕಾರ್ಯಯೋಜನೆಗಳು ಇರಬೇಕಾಗಿದೆ ಎಮದು ಕರೆನೀಡಿದರು.
    ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರು ಉಪಸ್ಥಿತರಿದ್ದು ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಹಿರಿಯ ತಲೆಮಾರಿನವರು ಕಟ್ಟಿಕೊಟ್ಟ ಶ್ರೀಮಂತ ಪರಿಕಲ್ಪನೆಯ ಬದುಕು ಸಂಸ್ಕøತಿಯ ನೆಲೆಯುಳ್ಳದ್ದು ಎಂದು ತಿಳಿಸಿದರು.
    ಹಿರಿಯ ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ, ಶ್ರೀಧರ್ಮಸ್ಥಳ ಮೇಳದ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಉದ್ಯಮಿ ಸುಬ್ರಹ್ಮಣ್ಯ ಹೆಬ್ಬಾರ್, ಲಕ್ಷ್ಮಣ ಪ್ರಭು ಕುಂಬಳೆ, ಶಂಕರ ಆಳ್ವ ಕುಂಬಳೆ, ಹಿರಿಯ ಜ್ಯೋತಿಷಿ ಪಿ.ವಿ.ನಾರಾಯಣ ಪೊದುವಾಳ್ ಪಯ್ಯನ್ನೂರು,ಸಜೇಶ್ ಪೊದುವಾಳ್ ಕುಂಬಳೆ, ತುಕಾರಾಮ ರಾಮನಗರ, ಶಿವರಾಮ ಕಡಪ್ಪುರ, ನಾರಾಯಣ ಪ್ರಭು ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರತು.
    ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿದರು. ಧನ್‍ರಾಜ್ ಸ್ವಾಗತಿಸಿ, ಕೆ.ದಿನಕರ ರಾವ್ ಪೈವಳಿಕೆ ವಂದಿಸಿದರು. ತಾರಾನಾಥ ಪುಜೂರು ಹಾಗೂ ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕೀರ್ತನ್ ಹೊಳ್ಳ ಮಂಗಳೂರು ಅವರಿಂದ ಕೀರ್ತನಾ ವೈಭವ, ಬೆಂಗಳೂರಿನ ಗೋಸ್ವಾಮಿ ತಂಡದವರಿಂದ ಜಾನಪದ ಸಂಭ್ರಮ ಕಾರ್ಯಕ್ರಮ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries