ಕಾಸರಗೋಡು: ಸ್ಟೇಷನರಿ ವಿತರಣೆ ವಲಯವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಸರಕಾರಿ ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗಳಿಗೆ, ಪೊಲೀಸ್ ಇಲಾಖೆ ವ್ಯಾಪ್ತಿಯ ಎಲ್ಲ ಡಿ.ವೈ.ಎಸ್.ಪಿ., ಸರ್ಕಲ್, ಪೊಲೀಸ್ ಸ್ಟೇಷನ್ ಗಳಿಗೆ, ನೋಂದಣಿ ಇಲಾಖೆಯ ಎಲ್ಲ ಉಪ ನೋಂದಣಿ ಕಚೇರಿಗಳ ವರೆಗೆ, ಪಶುಸಂಗೋಪನೆ ಇಲಾಖೆ ವ್ಯಾಪ್ತಿಯ ಮೃಗಾಸ್ಪತ್ರೆಗಳ ವರೆಗೆ, ಆಯುರ್ವೇದ ಇಲಾಖೆ ವ್ಯಾಪ್ತಿಯ ಎಲ್ಲ ಆಯುರ್ವೇದ ಆಸ್ಪತ್ರೆಗಳ ವರೆಗೆ, ಇತರ ಎಲ್ಲ ಇಲಖೆಗಳ ವ್ಯಾಪ್ತಿಯಲ್ಲಿರುವ ತಾಲೂ ಮಟ್ಟದ ವರೆಗಿನ ಜಾರಿಯಲ್ಲಿರುವ ವಿತರಣೆ ಕಾರ್ಡ್ ಇಲ್ಲ ಎಲ್ಲ ಕಚೇರಿಗಳಿಗೂ ನೇರವಾಗಿ ಸ್ಟೇಷನರಿ ವಿತರಣೆ ನಡೆಸಲಾಗುವುದು.
ಸ್ಟೇನರಿ ಸಾಮಾಗ್ರಿಗಳನ್ನು ಮಂಜೂರು ಮಾಡುವ ಪ್ರಾರಂಭದ ಚಟುವಟಿಕೆಗಳಿಗಾಗಿ ಕಚೇರಿಯ ಪೂರ್ಣ ವಿಳಾಸ, ಕಚೇರಿಯ ಮುಖ್ಯಸ್ಥರ ಔದ್ಯೋಗಿಕ ಪದವಿ(ವೇತನ ಪ್ರಮಾಣ ಸಹಿತ)ಜಿಲ್ಲಾ ಸ್ಟೇಷನರಿ ಕಚೇರಿಗೆ ಕಳುಹಿಸಬೇಕು. ಸ್ಟೇಷನರಿ ವಿತರಣೆ ಪ್ರಕ್ರಿಯೆ ಈಗ ಪೂರ್ಣ ಪ್ರಮಾಣದಲ್ಲಿ ಆನ್ ಲೈನ್ ನೋಂದಣಿ ರೂಪದಲ್ಲಿ ಮೊಬೈಲ್ ನಂಬ್ರ ಸಹಿತ ದಾಖಲಿಸಬೇಕು.
ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವ ತಕ್ಷಣ ವೆಬ್ ಸೈಟ್ ಮೂಲಕ ಕಚೇರಿಯ ಪೂರ್ಣ ಮಾಹಿತಿ, ಹುದ್ದೆಗಳ ಮಾಹಿತಿ, ಈ ಆರ್ಥಿಕ ವರ್ಷದ ಡಿಮಾಂಡ್ ಫೋರ್ ಕಾಸ್ಟ್ ಇತ್ಯಾದಿ ಆನ್ ಲೈನ್ ಮುಖಾಂತರ ದಾಖಲಿಸಿ ಸಲ್ಲಿಸಬೇಕು. ಹೆಚ್ಚಿನಮಾಹಿತಿಗೆ ಚಟುವಟಿಕೆ ದಿನಗಳಲ್ಲಿ ಜಿಲ್ಲಾ ಸ್ಟೇಷನರಿ ಕಚೇರಿಯನ್ನು (ದೂರವಾಣಿ ಸಂಖ್ಯೆ: 9020454434.) ಸಂಪರ್ಕಿಸಬಹುದು.