ಕಾಸರಗೋಡು: ಹುತಾತ್ಮ ಬಿಎಂಎಸ್ ಉಪಾಧ್ಯಕ್ಷ ನ್ಯಾಯವಾದಿ ಸುಹಾಸ್ ಸ್ಮೃತಿ ದಿನಾಚರಣೆ ಬಿಎಂಎಸ್ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ನಡೆಯಿತು.
ಸುಹಾಸ್ ಅವರ ಭಾವಚಿತ್ರಕ್ಕೆ ಬಿಎಂಎಸ್ ಜಿಲ್ಲಾ ಅಧ್ಯಕ್ಷ ಪಿ.ಮುರಳೀಧರನ್ ಪುಷ್ಪಾರ್ಚನೆಗೈದು ಸ್ಮೃತಿ ದಿನಾಚರಣೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಾಂಘಿಕ ನಡೆಸಲಾಯಿತು.
ಹಿಂದು ಐಕ್ಯವೇದಿಯ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು ಸಂಸ್ಮರಣೆ ಭಾಷಣ ಮಾಡಿದರು. ಬಿಎಂಎಸ್ ಜಿಲ್ಲಾಧ್ಯಕ್ಷ ಪಿ.ಮುರಳೀಧರನ್, ಕೆ.ಎ.ಶ್ರೀನಿವಾಸ, ಪಿ.ವಿ.ಸತ್ಯನಾಥ, ಟಿ.ಕೃಷ್ಣನ್, ವಿ.ಗೋವಿಂದನ್, ಪಿ.ದಿನೇಶ್, ಅನಿಲ್ ಬಿ.ನಾಯರ್, ವಾಗೀಶ್, ಕೆ.ಟಿ.ಕಾಮತ್, ಪಿ.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.