ಎಣ್ಮಕಜೆ ಪಂಚಾಯತ್ ಯು.ಡಿಎಫ್. ಸಮಾವೇಶ
0
ಏಪ್ರಿಲ್ 04, 2019
ಪೆರ್ಲ: ಎಣ್ಮಕಜೆ ಪಂಚಾಯತ್ ಯು.ಡಿಎಫ್. ಸಮಾವೇಶ ಕೆಬಿಎಚ್ ಕಾಂಪ್ಲೆಕ್ಸ್‍ನಲ್ಲಿ ಜರಗಿತು. ಸಮಾವೇಶವನ್ನು ಉದ್ಘಾಟಿಸಿದ ಕೇರಳ ಪ್ರದೇಶ ಕಾಂಗ್ರೆಸ್ಸ್ ಕಾರ್ಯಕಾರಿ ಸದಸ್ಯ, ನ್ಯಾಯಾವಾದಿ ಸಿ.ಕೆ.ಶ್ರೀಧರನ್ ಅವರು ಕೇರಳದ ಸಮಸ್ತ ಅಭಿವೃದ್ಧಿ ಯುಡಿಎಫ್‍ನಿಂದ ಮಾತ್ರ ಸಾಧ್ಯ. ಕೇರಳದ ಜನತೆ ಬುದ್ಧಿವಂತ, ವಿದ್ಯಾವಂತರಾಗಿದ್ದು ಇಲ್ಲಿ ಯಾವುದೇ ಅಲೆ ತರಂಗಗಳೂ ಇಲ್ಲ. ಇಲ್ಲಿ ಎಲ್‍ಡಿಎಫ್ ಮತ್ತು ಯುಡಿಎಫ್‍ನ ನಡುವೆ ನೇರ ಸ್ಪರ್ಧೆಯಾಗಿದೆ. ಕೇರಳದ ಅಭಿವೃದ್ಧಿ ಜೊತೆಗೆ ಫ್ಯಾಸಿಸಂ ಶಕ್ತಿಗೆದುರಾಗಿ, ಕೋಮುವಾದಕ್ಕೆ , ಕೊಲೆ ರಾಜಕೀಯಕ್ಕೆದುರಾಗಿ ನಾವೆಲ್ಲ ಒಮ್ಮತದಿಂದ ಯುಡಿಎಫ್‍ಗಾಗಿ ಕೆಲಸಮಾಡಬೇಕಾಗಿದೆ ಎಂದು ಹೇಳಿರು.
ಲೋಕಸಭಾ ಚುನಾವಣಾ ಅಭ್ಯರ್ಥಿ ರಾಜ್‍ಮೋಹನ್ ಉಣ್ಣಿತ್ತಾನ್ ಕನ್ನಡದಲ್ಲಿ ತಮ್ಮ ಮಾತನ್ನು ಆರಂಭಿಸಿ ಕನ್ನಡದಲ್ಲೇ ತಮ್ಮ ಪರಿಚಯವನ್ನು ಮಾಡಿಕೊಂಡರು. ನಾನು ಕಾಸರಗೋಡಿನ ಬಗ್ಗೆ ಮಾತನಾಡಬೇಕೆಂದರೆ ಹೆಮ್ಮೆಯಾಗುತ್ತೆ. ಕಾಸರಗೋಡಿನ ಜನತೆ ಹೃದಯವೈಶಾಲ್ಯತೆ ಅಪಾರವಾದುದು. ಕಲೆ, ಸಂಸ್ಕøತಿ,ಧಾರ್ಮಿಕತೆ, ಸಾಮರಸ್ಯೆಕ್ಕೆ, ಭಾಷಾ ಸೌಹಾರ್ದತೆಗೆ ಕಾಸರಗೋಡಿನ ಕೊಡುಗೆ ಅಪಾರವಾದುದು. ನಾನು ಚಿತ್ರರಂಗದಲ್ಲಿ ಸುಮಾರು 20 ಮಲಯಾಳಂ ಚಿತ್ರಗಳಲ್ಲಿ ನಟಿಸುವ ಮೂಲಕ ಕಲೆಯ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ. ಇಲ್ಲಿ ಹಲವಾರು ಸಮಸ್ಯೆಗಳಿಗೆ ಯುಡಿಎಫ್ ಸಮರ್ಪಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದು ದಿ.ಅಬ್ದುಲ್ ರಾಜಾಕ್ ಅವರ ಮೂಲಕ ಗ್ರಾಮೀಣ ಅಭಿವೃದ್ಧಿಯನ್ನು ಕಂಡುಕೊಂಡಿದ್ದೇವೆ. ಅವರ ಅಗಲಿಕೆ ನಮಗೆ ತೀವ್ರ ನಷ್ಟವೆಂದೂ ಈ ಸಂದರ್ಭದಲ್ಲಿ ಅವರನ್ನು ನೆನಪಿಸಬೇಕಾದ ಅಗತ್ಯವಿದೆ ಎಂದರು.
ಹಿಂದು, ಕ್ರೈಸ್ತ, ಮುಸ್ಲಿಂ ಯಾವುದೇ ಬೇಧವಿಲ್ಲದೇ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ರೀತಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತವಾಗಿ ನೆರವು ನೀಡುವಲ್ಲಿ ನಮ್ಮ ಐಕ್ಯರಂಗ ಸಾಧನೆ ಮಹತ್ತರವಾದುದು. ಎಲ್ಲ ಧರ್ಮದವರೂ ಪವಿತ್ರವೆಂದು ಗೌರವಯುತ ಸ್ಥಾನದಲ್ಲಿ, ವಿದೇಶಿಯನ್ನರೂ ಕೂಡಾ ಆರಾಧಿಸುವ ಕ್ಷೇತ್ರ ಶಬರಿಮಲೆ. ಅಂತಹ ಶಬರಿಮಲೆ ಅಯ್ಯಪ್ಪ ಸ್ವಾಮಿ ಅಖಂಡ ಬ್ರಹ್ಮಚಾರಿಯಾಗಿದ್ದು ಅಲ್ಲಿನ ಆಚಾರ ವಿಚಾರವನ್ನು ಉಳಿಸುವುದು ಕೂಡ ಐಕ್ಯರಂಗದ ಶ್ಲಾಘನೀಯ ಕೆಲಸ. ಪ್ರಬುದ್ಧತೆಯ ಮತದಾರರಿರುವ ವಿದ್ಯಾವಂತರಿರುವ ಕಾಸರಗೋಡು ಕ್ಷೇತ್ರದಲ್ಲಿ ನಾನು ಸ್ಪರ್ಧಿಸುತ್ತಿದ್ದು ಇಲ್ಲಿನ ಜನತೆಯ ಸಮಸ್ಯೆಗಳನ್ನು ದಿಲ್ಲಿಯಲ್ಲಿ ಪ್ರತಿಧ್ವನಿಸುವ ಸಲುವಾಗಿ, ಕಾಸರಗೋಡನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ನನ್ನನ್ನು ಬಹುಮತದಿಂದ ಗೆಲ್ಲಿಸುವ ಸಲುವಾಗಿ ಎಲ್ಲ ಕಾರ್ಯಕರ್ತರು ಶ್ರಮವಹಿಸಬೇಕು. ಕೋಮುವಾದ ವಿರುದ್ಧ ನಾವು ಜಾತ್ಯತೀತವಾಗಿ ಮತ್ತು ಶಾಂತಿಯುತ ಕೇರಳಕ್ಕಾಗಿ ಯುಡಿಎಫ್‍ನ್ನು ಗೆಲ್ಲಿಸಬೇಕಾಗಿದೆ ಎಂದು ರಾಜ್ ಮೋಹನ್ ಉಣ್ಣಿತ್ತಾನ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಬಿ.ಯಸ್. ಗಾಂಭೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಯುಡಿಎಫ್ ಜಿಲ್ಲಾ ಸಂಚಾಲಕ ಎಂ.ಸಿ. ಕಮರುದ್ದೀನ್, ಆಶ್ರಫ್ ಆಲಿ, ಮಂಜುನಾಥ ಆಳ್ವ, ಎಂ.ಅಬ್ಬಾಸ್, ಸೋಮಶೇಖರ್ ಜೆ.ಎಸ್, ಪಿ.ವಿ. ಸುರೇಶ್, ಆಶ್ರಫ್ ಕಾರ್ಲೆ, ಹಮೀದ್ ಆಲಿ, ಎಣ್ಮಕಜೆ ಪಂಚಾಯತಿ ಅಧ್ಯಕ್ಷೆ ಶಾರದಾ ವೈ, ಆಯಿಷಾ ಎ.ಎ, ಸಿದ್ದೀಕ್ ಖಂಡಿಗೆ, ಸಿದ್ದೀಕ್ ವಳಮೊಗರು, ಅಬ್ದುಲ್ ರಹಿಮಾನ್, ವಿಲ್‍ಫ್ರೆಡ್ ಡಿ'ಸೋಜ, ಎ.ಕೆ. ಶೆರೀಫ್, ಐತ್ತಪ್ಪ ಕುಲಾಲ್, ಆಮು ಅಡ್ಕಸ್ಥಳ, ಗೀತಾ ಎಂ, ಪುಷ್ಪಾ, ಜಯಶ್ರೀ ಕುಲಾಲ್, ನವೀನ್ ನಾಯಕ್, ಎಸ್ ಅಬ್ದುಲ್ಲಾ ಉಪಸ್ಥಿತರಿದ್ದರು. ಪಿ ಅಬೂಬಕ್ಕರ್ ಸ್ವಾಗತಿಸಿ, ರವೀಂದ್ರನಾಥ ನಾಯಕ್ ವಂದಿಸಿದರು.
ಬಳಿಕ ನಡೆದ ಚುನಾವಣೆ ಸಮಿತಿ ರೂಪೀಕರಣದಲ್ಲಿ ಅಧ್ಯಕ್ಷರಾಗಿ ಬಿ.ಅಬೂಬಕ್ಕರ್, ಕನ್ವೀನರ್ ಆಗಿ ಬಿ.ಯಸ್.ಗಾಂಭೀರರನ್ನೊಳಗೊಂಡ 501 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಯಿತು.