ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಪರಾಭವ ಭೀತಿಯಿಂದ ಕಂಗಾಲಾಗಿರುವುದೇ ಎನ್‍ಡಿಎ ಅಭ್ಯರ್ಥಿ ರವೀಶ ತಂತ್ರಿ ಕುಂಟಾರ್ ಅವರನ್ನು ಕಲ್ಯಾಶ್ಶೇರಿಯಲ್ಲಿ ಪ್ರಾಣಾಪಾಯ ನಡೆಸಲು ಯತ್ನಿಸಿರುವುದರ ಪ್ರಧಾನ ಹಿನ್ನೆಲೆಯಾಗಿದೆ ಎಂದೂ, ಪೆÇಲೀಸ್ ಠಾಣೆಯ ಸನಿಹದಲ್ಲೇ ಇಂತಹ ಹಲ್ಲೆ ನಡೆದಿದ್ದರೂ ಆ ಬಗ್ಗೆ ಸ್ವಯಂ ಆಗಿ ಪ್ರಕರಣ ದಾಖಲಿಸಿಕೊಳ್ಳದ ಕಣ್ಣಾಪುರಂ ಪೆÇಲೀಸರು ಆರೋಪಿಗಳನ್ನು ತತ್‍ಕ್ಷಣ ಬಂಧಿಸಲಿಲ್ಲ. ಇದಕ್ಕೆ ಪೆÇಲೀಸರು ಸಿಪಿಎಂನ ಆಜ್ಞಾನುವರ್ತಿಗಳಾಗಿರುವುದೇ ಕಾರಣವೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ.ಕೆ.ಶ್ರೀಕಾಂತ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಈ ಬಗ್ಗೆ ರವೀಶ ತಂತ್ರಿ ಅವರು ದೂರು ನೀಡಿದ ಬಳಿಕವಷ್ಟೇ ಕೇಸು ದಾಖಲಿಸಲು ಪೆÇಲೀಸರು ಮುಂದಾಗಿದ್ದರು. ಕಣ್ಣಾಪುರಂ ಪ್ರದೇಶ ಕೆಂಪು ಭದ್ರ ಕೋಟೆಯಾಗಿದೆ. ಅಲ್ಲಿ ಪೆÇಲೀಸರಿಲ್ಲ. ಬದಲಾಗಿ ಸಿಪಿಎಂನ ಕಾರುಬಾರೇ ನಡೆಯುತ್ತಿದೆ. ಪೆÇಲೀಸ್ ಅಧಿಕಾರಿಗಳು ಸಿಪಿಎಂ ನೇತಾರರ ಹಾಗೆ ವರ್ತಿಸುತ್ತಿದ್ದಾರೆ. ಸಿಪಿಎಂನ ಭದ್ರಕೋಟೆಗಳ ತಳಭಾಗದಿಂದಲೇ ಬಿಜೆಪಿ ಪರ ಸೋರಿಕೆ ಉಂಟಾಗಿರುವುದು ಸಿಪಿಎಂಗೆ ಸ್ವಯಂ ಆಗಿ ಈಗ ಮನವರಿಕೆಯಾಗಿದೆ. ಅದರಿಂದ ತಲ್ಲಣಗೊಂಡ ಸಿಪಿಎಂ ಈಗ ಎನ್‍ಡಿಎ ಅಭ್ಯರ್ಥಿಗಳೂ ಸೇರಿದಂತೆ ಬಿಜೆಪಿಯವರಿಗೆ ಆಕ್ರಮಿಸಿ ಬೆದರಿಕೆ ಒಡ್ಡುತ್ತಿರುವುದರ ಪ್ರಧಾನ ಹಿನ್ನೆಲೆಯಾಗಿದೆ ಎಂದು ಶ್ರೀಕಾಂತ್ ಆರೋಪಿಸಿದರು.
ಸಿಪಿಎಂ ಶಕ್ತಿ ಕೇಂದ್ರಗಳಲ್ಲಿ ಪ್ರಜಾತಾಂತ್ರಿಕ ರೀತಿಯ, ಸ್ವತಂತ್ರ, ನಿರ್ಭಯವಾಗಿ ಇತರ ಪಕ್ಷಗಳಿಗೆ ಚುನಾವಣಾ ಪ್ರಚಾರ ನಡೆಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಅದರಿಂದಾಗಿ ಅಂತಹ ಕೇಂದ್ರಗಳಲ್ಲಿ ಚುನಾವಣೆ ಮುಗಿಯುವ ತನಕ ಈಗಿನಿಂದಲೇ ಕೇಂದ್ರ ಪಡೆಯನ್ನು ನಿಯೋಜಿಸಲು ಚುನಾವಣಾ ಆಯೋಗ ಮುಂದಾಗಬೇಕು. ಈ ಬಗ್ಗೆ ಜಿಲ್ಲಾ ಪೆÇಲೀಸ್ ಅಧಿಕಾರಿ ಮತ್ತು ಕೇಂದ್ರ ಚುನಾವಣಾ ಆಯೋಗವನ್ನು ಸಮೀಪಿಸುವುದಾಗಿಯೂ ಶ್ರೀಕಾಂತ್ ತಿಳಿಸಿದ್ದಾರೆ.
ಪರಾಭವ ಭೀತಿ ಹೊಂದಿರುವ ಸಿಪಿಎಂ ಕಳ್ಳಮತ ಚಲಾಯಿಸಲು ತಮ್ಮ ಕಾರ್ಯಕರ್ತರಿಗೆ ವಿಶೇಷ ರೀತಿಯ ತರಬೇತಿ ನೀಡುತ್ತಿದೆ. ಇದಕ್ಕಾಗಿ ಪ್ರತಿ ಬ್ರಾಂಚ್ ಮಟ್ಟಗಳಲ್ಲಿ ಸಿಪಿಎಂ ಆ್ಯಕ್ಷನ್ ಪ್ಲಾನ್‍ಗೂ ರೂಪು ನೀಡಿದೆ ಎಂದು ಆರೋಪಿಸಿದ್ದಾರೆ.
ಈ ಲೋಕಸಭಾ ಚುನಾವಣೆಯ ಪ್ರಧಾನ ಸ್ಪರ್ಧೆ ಎನ್‍ಡಿಎ ಮತ್ತು ಎಡರಂಗದ ಮಧ್ಯೆ ಏರ್ಪಟ್ಟಿದೆ. ಯುಡಿಎಫ್ ಮೂಲೆ ಗುಂಪಾಗತೊಡಗಿದೆ. ಈ ಚುನಾವಣೆಯಲ್ಲಿ ಕಾಸರಗೋಡು ಸಹಿತ ಕೇರಳದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಎನ್‍ಡಿಎ ಗೆಲುವು ಸಾಧಿಸಲಿದೆ. ಎಡರಂಗ ಮತ್ತು ಯುಡಿಎಫ್‍ನ ಭಾರೀ ಮತಗಳು ಎನ್‍ಡಿಎಗೆ ಲಭಿಸಲಿದೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ಬಿಜೆಪಿ ನೇತಾರರಾದ ಸುರೇಶ್ ಕುಮಾರ್ ಶೆಟ್ಟಿ, ಪ್ರಮೀಳಾ ಸಿ.ನಾೈಕ್, ವೇಲಾಯುಧನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.